Saturday, April 19, 2025
Google search engine

Homeರಾಜ್ಯಸುದ್ದಿಜಾಲಮಾನವ-ಆನೆ ಸಂಘರ್ಷವನ್ನು ತಗ್ಗಿಸಲು ರೈಲ್ವೆಕಂಬಿ ಬೇಲಿ ನಿರ್ಮಿಸಲು ಅನುದಾನಕ್ಕೆ ಮನವಿ

ಮಾನವ-ಆನೆ ಸಂಘರ್ಷವನ್ನು ತಗ್ಗಿಸಲು ರೈಲ್ವೆಕಂಬಿ ಬೇಲಿ ನಿರ್ಮಿಸಲು ಅನುದಾನಕ್ಕೆ ಮನವಿ

ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರಿಗೆ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರಿಂದ ಮನವಿ ಪತ್ರ ಸಲ್ಲಿಕೆ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಪ್ರದೇಶದಲ್ಲಿ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ರೈಲ್ವೆಕಂಬಿ ಬೇಲಿ ನಿರ್ಮಿಸಲು 2023-24 ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಮಂಜೂರು ಮಾಡಿಕೊಡಬೇಕೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರಿಗೆ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಮನವಿ ಪತ್ರ ಸಲ್ಲಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮನವಿ ಪತ್ರ ನೀಡಿ ಹುಣಸೂರು ವಿಧಾನಸಭಾ ಕ್ಷೇತ್ರದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿನ ವೀರನಹೊಸಹಳ್ಳಿ ವನ್ಯಜೀವಿ ವಲಯ ಹಾಗೂ ಹುಣಸೂರು ವನ್ಯಜೀವಿ ವಲಯದ ಕಾಡಂಚಿನಲ್ಲಿ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಬೇಲಿಯನ್ನು ಕಳೆದ ಸರ್ಕಾರದ ಅವಧಿಯಲ್ಲಿ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿದ್ದು, ಹುಣಸೂರು ವಲಯದ ಉಡುವೇಪುರದಿಂದ ಆನೆಚೌಕೂರು ವಲಯದ ಉತ್ತೇನಹಳ್ಳಿವರೆಗೆ ಸೂಕ್ಷ್ಮ ಹಾಗೂ ಅಧಿಕ ವನ್ಯಪ್ರಾಣಿಗಳ ಹಾವಳಿ ಇರುವ ಪ್ರದೇಶದಲ್ಲಿ ರೈಲ್ವೆ ಕಂಬಿ ಬ್ಯಾರಿಕೇಡ್ ನಿರ್ಮಾಣಕ್ಕೆ 4,00 ಕೋಟಿ ರೂಗಳು ಮಂಜೂರಾಗಿದ್ದು, ಸದರಿ ಯೋಜನೆಯನ್ನು ಮಾರ್ಪಡಿಸಿ ಮಂಜೂರಾಗಿದ್ದ ಅನುಧಾನವನ್ನು ಕಡಿಮೆ ಯೋಜನಾ ವೆಚ್ಚವೆಂದು ಹೇಳಿ ಹೊಸ ತಾಂತ್ರಿಕತೆಗಾಗಿ (ರೋಪ್ ಬ್ಯಾರಿಕೇಡ್’ ತಂತ್ರಜ್ಞಾನ) ಉಪಯೋಗಿಸಿಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷತೆ ಹಾಗೂ ಆಡಳಿತ ಪಕ್ಷದ ಶಾಹಿ ದೋರಣೆಯಿಂದ ಆನೇಚೌಕೂರು ವಲಯಕ್ಕೆ ಉಪಯೋಗಿಸಿಕೊಳ್ಳಲಾಗಿರುತ್ತದೆ. ಪ್ರಸ್ತುತ ಅಳವಡಿಸಿರುವ ರೋಪ್ ಬ್ಯಾರಿಕೇಡ್ ತಂತ್ರಜ್ಞಾನವು ಹಲವು ನ್ಯೂನತೆಗಳಿಂದ ಹಾಗೂ ತಾಂತ್ರಿಕ ದೋಷಗಳಿಂದ ಕೂಡಿರುವ ಹಿನ್ನಲೆಯಲ್ಲಿ ವಿಫಲ ಯೋಜನೆಯಾಗಿರುತ್ತದೆ.

ಸದರಿ ಯೋಜನೆಯನ್ನು ಪುನರ್‌ ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಕಳೆದ ಆರ್ಥಿಕ ಸಾಲಿನಲ್ಲಿ ಮಂಜೂರಾದ ಅನುಧಾನ ಬೇರೆ ತಾಲ್ಲೂಕಿಗೆ ವರ್ಗಾವಣೆಯಾದ ಕಾರಣ ಹುಣಸೂರು ಭಾಗಕ್ಕೆ ಅನ್ಯಾಯವಾಗಿರುತ್ತದೆ, ಅತಿಸೂಕ್ಷ್ಮವಾದ ಸಮಸ್ಯೆ ಸಮಸ್ಯೆಯಾಗಿ ಉಳಿದಿರುತ್ತದೆ.

ಕರ್ನಾಟಕ ರಾಜ್ಯದಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿನ ಕಾಂಗ್ರೆಸ್ ಆಡಳಿತದ ಕಳೆದ ಅವಧಿಯಲ್ಲಿ (2013-18) ಈ ಹಿಂದಿನ ಅರಣ್ಯ ಮಂತ್ರಿಗಳಾಗಿದ್ದ ರಮಾನಾಥ ರೈ ರವರ ಅವಧಿಯಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ವೀರನಹೊಸಹಳ್ಳಿ ವಲಯದಲ್ಲಿ ರೈಲ್ವೆ ಬ್ಯಾರಿಕೇಡ್ ಯೋಜನೆಯನ್ನು ಫೈಲೇಟ್ ಯೋಜನೆಯಾಗಿ ಅನುಷ್ಠಾನ ಮಾಡಲಾಗಿದ್ದು, ರೈಲ್ವೇ ಬ್ಯಾರಿಕೇಡ್ ಅಳವಾಡಿಸಲು ಬಾಕಿ ಇರುವ ಸ್ಥಳಗಳಿಂದ ಕಾಡಿನಿಂದ ಕಾಡಾನೆಗಳು ಹೊರ ಬರುತ್ತಿವೆ. ಆದ್ದರಿಂದ 2023-24 ನೇ ಸಾಲಿನ ಆಯವ್ಯದಲ್ಲಿ ಮಾನವ ಕಾಡನೆ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ 120 ಕೋಟಿ ರೂಗಳನ್ನು ಅನುಧಾನವನ್ನು ಘೋಷಣೆ ಮಾಡಲಾಗಿರುತ್ತದೆ. ಆದ್ದರಿಂದ ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿನ ಕಿಕ್ಕೇರಿಕಟ್ಟೆ ಅರಣ್ಯದಂಚಿನ ಉಡುವೇಪುರದಿಂದ ಉತ್ತೇನಹಳ್ಳಿ ವರೆಗಿನ ಪ್ರದೇಶವು ಅತಿಸೂಕ್ಷ್ಮ ಪ್ರದೇಶವಾಗಿದ್ದು, ಕಾಡಾನೆ ಹಾವಳಿ ನಿಯಂತ್ರಣದ ಪ್ರಮುಖ ಭಾಗವಾಗಿರುವ ಕಾರಣ ಖಾಯಂ ಪರಿಹಾರವಾಗಿ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಯೋಜನೆಯನ್ನು ಪ್ರಸಕ್ತ ಆರ್ಥಿಕ ವರ್ಷದ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿ ಅಭಿವೃದ್ಧಿ ಪಡಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕೆಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular