ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ನಲ್ಲಿ ನಡೆದ ಗಾಯನ ಸ್ಪರ್ಧೆ ಹಾಗೂ ಕಥೆ ಹೇಳುವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುಕೆಜಿ ವಿದ್ಯಾರ್ಥಿನಿ ಅಲೀನಾ ಫಾತಿಮಾ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಈಕೆ ಎಲ್ ಕೆಜಿಯಲ್ಲಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಮೊನ್ನೆ ನಡೆದ ‘ನಲಿವು’ ವಾರ್ಷಿಕ ಶಾಲಾ ಕಾರ್ಯಕ್ರಮದಲ್ಲಿ ‘ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್’ನೀಡಿ ಗೌರವಿಸಲಾಯಿತು. ಈಕೆ ಉಪ್ಪಿನಂಗಡಿ ನೆಕ್ಕಿಲಾಡಿ ನಿವಾಸಿ ಅಶ್ಪಾಕ್ ಹಾಗೂ ರುಬೀನಾ ಬೇಗಂ ಬುಡೋಳಿ ದಂಪತಿಯ ಪುತ್ರಿ.