ಹುಣಸೂರು: ಸಾಧನೆ ಮಾಡಿದಾಗ ಬೇರೆಡೆ ಸಿಗುವ ಸನ್ಮಾನಗಳಿಗಿಂತ ಹುಟ್ಟೂರಿನಲ್ಲಿ ಸಿಗುವ ಅಭಿಮಾನ ಎಲ್ಲದಕ್ಕೂ ಮಿಗಿಲಾದದ್ದು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.
ತಾಲೂಕಿನ ಹಗನಹಳ್ಳಿ ಮಂಟಿಕೊಪ್ಪಲು ಗ್ರಾಮದಲ್ಲಿ ಇತ್ತೀಚಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಕಲಾವಿದ ಹಾಗೂ ಚಲನಚಿತ್ರದ ಪೋಷಕ ನಟ ಕುಮಾರ್ ಅರಸೇಗೌರನ್ನು ಸನ್ಮಾನಿಸಿ ಮಾತನಾಡಿದ ಅವರು, ನಮಗೆ ಯಾವುದೆ ಪ್ರಶಸ್ತಿಗಳು ಸಿಕ್ಕರೂ ನಮ್ಮೂಟ್ಟಿರಿನ ಸನ್ಮಾನ ಎಲ್ಲದಕ್ಕೂ ದೊಡ್ದದು ಎಂದರು.
ಕುಮಾರ್ ಅರಸೇಗೌಡರನ್ನು ನಾವು ಬಾಲ್ಯದಿಂದಲೂ ನೋಡಿದ್ದೇನೆ. ಅವರು ಕಲೆಯನ್ನೇ ಸರ್ವಸ್ವವೆಂದು ಪೂಜಿಸುವ ಗುಣದವರು. ಆದ್ದರಿಂದ ಅವರು ಸಿನಿಮಾ, ನಾಟಕ, ಧಾರವಾಹಿಗಳಲ್ಲಿ , ಹಾಸ್ಯ ನಟನಾ ವಿಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳದು ತಾಲೂಕಿಗೆ ಕೀರ್ತಿ ತರಲಿ ಎಂದರು.
ಹುಟ್ಟೂರಿನ ಸನ್ಮಾನ ಸ್ವೀಕರಿಸಿ ಮಾತನಾಡಿದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಮಾರ್ ಅರಸೇ ಗೌಡ. ಹಲವು ಕಡೆ ನನ್ನನ್ನ ಆಹ್ವಾನಿಸಿದ್ದಾರೆ, ಪ್ರೀತಿಸಿ, ಸನ್ಮಾನಿಸಿದ್ದಾರೆ. ಆದರೆ ನನ್ನೂರಿನ ಸನ್ಮಾನ ನನಗೆ ಹೆಮ್ಮೆ ಮತ್ತು ಖುಷಿ ತಂದಿದೆ ಎಂದರು.
ಗ್ರಾಮದ ಶಕುಂತಲಾ,ಗ್ರಾ.ಪಂ.ಅದ್ಯಕ್ಷೆ ಸಿದ್ದಮ್ಮ, ಉಪಾಧ್ಯಕ್ಷ ವೆಂಕಟೇಶ್ ಚಾರ್, ಗ್ರಾಮದ ಮಂಚೇಗೌಡರು, ಸ್ವಾಮೀಗೌಡ, ಕುಮಾರ್, ರಾಜೇಗೌಡ, ಹಾಗೂ ಗ್ರಾಮಸ್ಥರು ಇದ್ದರು.