ಹೊಸೂರು : ಭಾನುವಾರ ಬೆಳಗಿನ ಜಾವ ಅಕ್ರಮವಾಗಿ ಅಣೆಕಟ್ಟೆಯ ಕ್ರಸ್ಟ್ ಗೇಟ್ ಗಳನ್ನು ಎತ್ತಿ ನಾಲೆಗೆ ನೀರು ಹರಿಸಿದ ಸ್ಥಳಕ್ಕೆ ಸಾಲಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೆ.ಆರ್.ನಗರ ನಂ ೫ ನೀರಾವರಿ ಇಲಾಖೆಯ ಎಇಇ ಗುರುರಾಜು ಈ ಸಂಬಂಧ ಸಾಲಿಗ್ರಾಮ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಠಾಣೆಯ ನಿರೀಕ್ಷಕ ಕೃಷ್ಣರಾಜು ಸ್ಥಳ ಪರಿಶೀಲನೆ ಮಾಡಿದರು
ತಾಲೂಕಿನ ಸಕ್ಕರೆ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಾಮರಾಜ ಬಲದಂಡೆ ನಾಲೆಯ ಅಣೆಕಟ್ಟೆಯಲ್ಲಿ ಹಾನಿ ಆಗಿರುವ ಕ್ರಸ್ಟ್ ಗೇಟ್ ಗಳನ್ನು ಸಹ ಪರಿಶೀಲನೆ ನಡೆಸಿದರು
ಈ ಘಟನೆಯ ಕುರಿತು ರಾಜ್ಯ ಸರ್ಕಾರವು ವರದಿ ಕೇಳಿದ ಹಿನ್ನಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಕೆ.ಆರ್.ನಗರ ನಂ- 5 ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ