Friday, April 18, 2025
Google search engine

Homeರಾಜ್ಯಸುದ್ದಿಜಾಲಅಗತ್ಯ ವೈದ್ಯರು , ಸಿಬ್ಬಂದಿ ನೇಮಕ ಹಾಗೂ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸೌಲಭ್ಯ...

ಅಗತ್ಯ ವೈದ್ಯರು , ಸಿಬ್ಬಂದಿ ನೇಮಕ ಹಾಗೂ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸೌಲಭ್ಯ ಕಲ್ಪಿಸುವಂತೆ ಮನವಿ

ಶಾಸಕ ಡಿ‌.ರವಿಶಂಕರ್ ಸರ್ಕಾರಕ್ಕೆ ಮನವಿ

ಹೊಸೂರು : ಕೆ.ಆರ್.ನಗರ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಗೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸುವುದು ಜತಗೆ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸೌಲಭ್ಯ ಕಲ್ಪಿಸುವಂತೆ ಶಾಸಕ ಡಿ‌.ರವಿಶಂಕರ್ ಸರ್ಕಾರಕ್ಕೆ ಮನವಿ ಮಾಡಿದರು
ವಿಧಾನ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿರುವ ಆಸ್ವತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಇರುವ ಪರಿಣಾಮ ಸೂಕ್ತ ಆರೋಗ್ಯ ಚಿಕಿತ್ಯೆ ದೊರೆಯದಂತೆ ಆಗಿದೆ ಎಂದು ಸರ್ಕಾರದ ಗಮನ ಸೆಳೆದರು.
ಇದರಿಂದ ಕ್ಷೇತ್ರದಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ವತ್ರೆಗಳಿಂದ ಖಾಸಗಿ ಆಸ್ವತ್ರೆಯತ್ತ ಮುಖಮಾಡುವಂತೆ ಆಗಿದ್ದು ತಕ್ಷವೇ ಇಲ್ಲಿನ ಆಸ್ವತ್ರೆಗಳಿಗೆ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಇದರ ಜತಗೆ ಕ್ಷೇತ್ರದಲ್ಲಿ ರೈತರ ಪಂಪ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಸೌಲಭ್ಯ ಇಲ್ಲದೇ ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಿದ್ದು ಅದ್ದರಿಂದ ಇಂಧನ ಇಲಾಖೆಯವರು ಅಗತ್ಯವಾಗಿ ಪವರ್ ಸ್ಟೇಷನ್ ಗಳನ್ನು ಇನ್ನಷ್ಟು ಮಂಜೂರು ಮಾಡಿ ರೈತರಿಗೆ ನಿಗಧಿತ ವಿದ್ಯುತ್ ಸೌಲಭ್ಯವನ್ನು ನೀಡುವಂತೆ ಮನವಿ ಮಾಡಿದರು.
ಕೆ.ಆರ್.ನಗರ ಕ್ಷೇತ್ರವು ಭತ್ತದ ಕಣಜ ಎಂದು ಹೆಸರು ವಾಸಿಯಾಗಿದ್ದು ಇಲ್ಲಿ ರೈತರು ಬೆಳೆಯುವ ವಿವಿಧ ಬೆಳೆಗಳ ಬಿತ್ತನೆ ಬೀಜಗಳು ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗದೇ ರೈತರು ಖಾಸಗಿ ಅಂಗಡಿಗಳಿಗೆ ಹೋಗಬೇಕಾದ ಅನಿವಾರ್ಯತೆ ಇದ್ದು ತಕ್ಷಣವೇ ಕೃಷಿ ಇಲಾಖೆಗೆ ಬಿತ್ತನೆ ಬೀಜದ ದಾಸ್ತಾನು ನೀಡುವಂತೆ ಕೋರಿದರು.
ಇದಲ್ಲದೇ ಕ್ಷೇತ್ರದ ವ್ಯಾಪ್ತಿಯ ಅನೇಕ ಶಾಲೆಗಳ ಕಟ್ಟಡಗಳು ಶಿಥಿಲ ವ್ಯವಸ್ಥೆಯಲ್ಲಿ ಇದ್ದು ಇದರಿಂದ ಭಯದ ವಾತವರಣದಲ್ಲಿ ಮಕ್ಕಳು‌ ಪಾಠ ಪ್ರವಚನಗಳನ್ನು ಕೇಳುವಂತೆ ಆಗಿದ್ದು ತಕ್ಷವೇ ಶಿಕ್ಷಣ ಸಚಿವರು ಗಮನಹರಿಸಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಗಮನ ಹರಿಸಿ ಅನುಧಾನ ಬಿಡುಗಡೆ ಮಾಡುವಂತೆ ಕೋರಿದರು.

RELATED ARTICLES
- Advertisment -
Google search engine

Most Popular