Saturday, April 19, 2025
Google search engine

Homeರಾಜ್ಯಉಪ ಚುನಾವಣೆ ಸೋಲಿನಿಂದ ಯಾರು ಎದೆಗುಂದಬೇಕಿಲ್ಲ: ಬಿಜೆಪಿ ಕಾರ್ಯಕರ್ತರಿಗೆ ಬಿ.ವೈ.ವಿಜಯೇಂದ್ರ ಪತ್ರ

ಉಪ ಚುನಾವಣೆ ಸೋಲಿನಿಂದ ಯಾರು ಎದೆಗುಂದಬೇಕಿಲ್ಲ: ಬಿಜೆಪಿ ಕಾರ್ಯಕರ್ತರಿಗೆ ಬಿ.ವೈ.ವಿಜಯೇಂದ್ರ ಪತ್ರ

ಬೆಂಗಳೂರು: ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಸೋಲಿನಿಂದ ಬಿಜೆಪಿ ಕಾರ್ಯಕರ್ತರು ಎದೆಗುಂದಬೇಕಿಲ್ಲ ಎಂದು ಹೇಳಿದ್ದಾರೆ.

ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತ ಎಂದು ಭಾವಿಸೋಣ ಎಂಬುವುದಾಗಿ ಬರೆದಿದ್ದಾರೆ. ಆಡಳಿತ ಸಮಯದಲ್ಲಿ ದುರ್ಮಾರ್ಗ ಬಳಸಿ ಗೆಲ್ಲುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸತಲ್ಲ, ಸೋಲನ್ನು ನಾವ್ಯಾರು ಕೂಡ ಹಿನ್ನಡೆ ಎಂಬುವುದಾಗಿ ಪರಿಗಣಿಸುವ ಅಗತ್ಯವಿಲ್ಲ. ಬಿಜೆಪಿ ಅಧಿಕಾರದ ಬೆನ್ನುಹತ್ತಿ ರಾಜಕಾರಣ ಮಾಡಲು ಜನ್ಮ ತಾಳಿದ್ದಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಚುನಾವಣೆ ಫಲಿತಾಂಶ ತಮ್ಮ ಭ್ರಷ್ಟತೆಯ ಕರಾಳ ಮುಖ ಒರೆಸಿಕೊಳ್ಳಲು ವಸ್ತ್ರವೂ ಆಗುವುದಿಲ್ಲ, ಅಸ್ತ್ರವೂ ಆಗುವುದಿಲ್ಲ ಎಂಬುವುದಾಗಿ ಬರೆದು ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿದ್ದಾರೆ.

ಅಭಿಪ್ರಾಯ ಭೇದಗಳಿಗೆ ಬಿಜೆಪಿಯಲ್ಲಿ ಮುಕ್ತ ಅವಕಾಶ ಇದ್ದೇ ಇದೆ, ಪ್ರತಿ ಕಾರ್ಯಕರ್ತ, ಮುಖಂಡರು, ಪ್ರಮುಖರು, ಹಿರಿಯರೊಂದಿಗೆ ವಿಶ್ವಾಸ ಹಾಗೂ ಪ್ರೀತಿಯನ್ನು ಗಳಿಸಿಕೊಂಡು ಪಕ್ಷ ಗಟ್ಟಿಗೊಳಿಸಬೇಕೆಂಬ ಹಂಬಲ ನನ್ನದು ಎಂದು ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶ ಪಕ್ಷದ ಸಂಘಟನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular