ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದೇಶದ ಸಂವಿಧಾನ ಮತ್ತು ಅದನ್ನು ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ನಾವೆಲ್ಲರು ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಕಟ್ಟಿಬದ್ದರಾಗಿ ಕೆಲಸ ಮಾಡೋಣ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ನಮ್ಮದಾಗಿದ್ದು ಇದನ್ನು ರಚಿಸಲು ಹಗಲಿರುಳಿ ಶ್ರಮಿಸಿ ದೇಶದ ಎಲ್ಲಾ ಧರ್ಮದ, ಭಾಷಿಕರು ಮತ್ತು ಸಮುದಾಯದವರಿಗೆ ಸಲ್ಲುವ ಸಂವಿಧಾನ ನೀಡದ ಬಾಬಾ ಸಾಹೇಬರು ಅಜರಾಮರ ಎಂದರು.
1946 ರ ನವೆಂಬರ್ 26 ರಂದು ನಡೆದ ಭಾರತ ದ ಸಂವಿಧಾನ ಸಭೆಯಲ್ಲಿ ದೇಶಕ್ಕೆ ಅಗತ್ಯವಾದ ಸಂವಿಧಾನವನ್ನು ಅಂಗೀಕರಿಸಿ ಸಂವಿಧಾನದ ಮುಂದೆ ಎಲ್ಲರು ಸಮಾನರು ಎಂಬ ಮಹತ್ವವನ್ನು ಸಾರಿದ ದಿನವೆ ಸಂವಿಧಾನ ದಿನ ಎಂದು ತಿಳಿಸಿದರು.
ಕಳೆದ ವರ್ಷ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನ ಪೀಠಿಕೆ ಭೋದನೆ ಮಾಡಿ ದೇದಸದ ಎಲ್ಲರೂ ಒಂದೆ ಎಂಬ ಭಾವನೆಯ ಸಂದೇಶ ಸಾರುವ ಉದ್ದೇಶದಿಂದ ಬೀದರ್‌ನಿಂದ ಚಾಮರಾಜನಗರದ ವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ದಾಖಲೆ ಮಾಡಿತು. ಅದರಂತೆ ನಾವುಗಳು ಸಂವಿಧಾನ ಶಿಲ್ಪಿಯ ಆಶಯಗಳನ್ನು ಒಂದು ದಿನ ಮಾತ್ರ ನೆನೆಯದೆ ವರ್ಷದ 365 ದಿನಗಳು ಕೂಡ ನೆನೆಯುವವ ಕೆಲಸ. ಮಾಡಬೇಕೆಂದರು.
ತಹಸಿಲ್ಧಾರ್ ಜಿ.ಸುರೇಂದ್ರಮೂರ್ತಿ, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕು ಮುನ್ನ ಮೈಸೂರು ಹಾಸನ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು.
ತಾಪಂ ಇಒ ವಿ.ಪಿ. ಕುಲದೀಪ್, ಟಿಹೆಚ್‌ಒ ಡಾ.ಡಿ.ನಟರಾಜ್, ಅಬಕಾರಿ ನಿರೀಕ್ಷಕ ವೈ.ಎಸ್.ಲೋಕೇಶ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಮಿಕ್ಸರ್‌ಶಂಕರ್, ಸೈಯದ್ ಸಿದ್ದೀಕ್, ಶಿವುನಾಯಕ್, ತಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ ಮತ್ತಿತರರು ಇದ್ದರು.