Saturday, April 19, 2025
Google search engine

Homeರಾಜ್ಯಸುದ್ದಿಜಾಲಕವಿ ಸಂಸ ಕನ್ನಡ ಸಾಹಿತ್ಯದ ರಾಜ: ಸುರೇಶ್ ಎನ್ ಋಗ್ವೇದಿ

ಕವಿ ಸಂಸ ಕನ್ನಡ ಸಾಹಿತ್ಯದ ರಾಜ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಕನ್ನಡ ಸಾಹಿತ್ಯದ ರಾಜ ಕಾದಂಬರಿಕಾರ,ನಾಟಕಕಾರ, ಕವಿ ಸಂಸ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಅಖಿಲ ಕರ್ನಾಟಕ ಕನ್ನಡ ಮಹಾಸಭಾ ,ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ 50 ದಿನಗಳ ನಿರಂತರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಚಾಮರಾಜನಗರ ಜಿಲ್ಲೆಯ ಹೆಮ್ಮೆಯ ಅಗರ ಗ್ರಾಮದ ಸಾಹಿತಿ ಸಂಸರವರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮೈಸೂರು ರಾಜವಂಶದ ಬಹುತೇಕ ರಾಜರ ಇತಿಹಾಸ, ವ್ಯಕ್ತಿತ್ವ ಚಿಂತನೆ, ಸಾಧನೆಗಳನ್ನು ತಮ್ಮ ಕೃತಿಗಳಲ್ಲಿ ಕಾದಂಬರಿಗಳಲ್ಲಿ ನಾಟಕಗಳಲ್ಲಿ ಚಿತ್ರಿಸಿದ ಸಂಸರವರು ನಾಡಿನ ಹೆಮ್ಮೆಯ ಸಾಹಿತಿಗಳಾಗಿದ್ದರು. ಅವರ ಬಹುತೇಕ ಸಾಹಿತ್ಯ ಕೃತಿಗಳು ನಾಶವಾಗಿದ್ದು ,ಕನ್ನಡ ಸಾಹಿತ್ಯದ ದುರಂತ ಎಂದರು.


ಮೈಸೂರು ರಾಜವಂಶದ ರಾಜರ ಮೇಲೆ ಕಾದಂಬರಿಗಳ ರಚನೆ, ನಾಟಕಗಳನ್ನು ರಚಿಸಿದ ಸಂಸರವರ ಸಾಹಿತ್ಯ ಕೆಲವೇ ಕೆಲವು ದೊರೆತಿದೆ.ಅವರ ಸಾಹಿತ್ಯ ಕೃತಿಗಳು ಜ್ಞಾನದ ಶ್ರೇಷ್ಠತೆಯನ್ನು ಸಾಹಿತ್ಯದ ಮೌಲ್ಯವನ್ನು ತಿಳಿಸುತ್ತದೆ. ಸಂಸ ಮಹಾಜ್ಞಾನಿ. ಅವರ ಒಂಟಿತನ, ತಮ್ಮೊಳಗಿನ ಆಂತರಿಕ ತೊಳಲಾಟದಿಂದ ಅವರ ವ್ಯಕ್ತಿತ್ವ ಮತ್ತೊಂದು ರೂಪ ಪಡೆದದ್ದು ಇತಿಹಾಸವಾಗಿದೆ. ಸಂಸ ಕುರಿತು ನಾಡಿನ ಅನೇಕ ಮಹನೀಯರು ವಿಶೇಷವಾಗಿ ಅವರ ಬಗ್ಗೆ ರಚಿಸಿರುವ ಕೃತಿಗಳಲ್ಲಿ ಅಮೂಲ್ಯವಾದ ಸಾಹಿತ್ಯದ ದೃಷ್ಟಿಕೋನಗಳು ದೊರೆಯುತ್ತದೆ ಎಂದು ತಿಳಿಸಿದರು.

ಪತ್ರಕರ್ತ ಹಾಗೂ ನಾಟಕಕಾರ ಎ ಡಿ ಸಿಲ್ವಾ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸಂಸರವರ ಬಾಲ್ಯ ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಗ್ರಾಮದ ಅಯ್ಯರ್ ರವರು ಮುಂದೆ ಸಂಸರಾಗಿ ನಾಡಿಗೆ ಪರಿಚಿತರಾದರು. ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ತಮ್ಮದೇ ಆದ ಯೋಚನೆಯ ಮೂಲಕ ವಿಶೇಷವಾಗಿ ನಾಟಕಗಳನ್ನು ,ಕಾದಂಬರಿಗಳನ್ನು ರೂಪಿಸಿದ್ದು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ . ಮೈಸೂರು ರಾಜವಂಶದ ರಣಧೀರ ಕಂಠೀರವ ಒಡೆಯರ್, ರಾಜ ಒಡೆಯರ್, ಚಾಮರಾಜ ಒಡೆಯರ್ ಮುಂತಾದವರ ಇತಿಹಾಸವನ್ನು ಚಿತ್ರಿಸಿದ್ದಾರೆ. ಮೈಸೂರು ರಾಜವಂಶದ ವ್ಯಕ್ತಿತ್ವವನ್ನು ಸಂಸರವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. 50 ದಿನಗಳ ನಿರಂತರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಲಿಕೆಯನ್ನು ರೂಪಿಸಿರುವ ಕನ್ನಡ ಸಂಘಟನೆಗಳ ಶ್ರಮ ಹಾಗೂ ಅವರ ಅಭಿಮಾನಕ್ಕೆ ಸರ್ವರೂ ಅಭಿನಂದನೆಗಳನ್ನು ಸಲ್ಲಿಸಲೇಬೇಕು ಎಂದು ತಿಳಿಸಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸವಾದ ಅಧ್ಯಕ್ಷರಾದ ಶ್ರೀನಿವಾಸ ಗೌಡರವರು ನಿರಂತರ ಇಪ್ಪತ್ತೈದನೇ ದಿನದಲ್ಲಿ ಜಿಲ್ಲೆಯ ಹೆಮ್ಮೆಯ ಕವಿ ಸಂಸರವರ ಸಾಹಿತ್ಯದ ಕೊಡುಗೆಗಳನ್ನು ತಿಳಿಸಿದರು. ಪ್ರತಿನಿತ್ಯ 6.30 ರಿಂದ 7.30 ರವರೆಗೆ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದ ಕಾರ್ಯಕ್ರಮಕ್ಕೆ ಸರ್ವರಿಗೂ ಆಗಮಿಸಿ ಯಶಸ್ವಿಗೊಳಿಸಿ ಎಂದು ತಿಳಿಸಿದರು.

ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಸರಸ್ವತಿ, ದ್ವಾರಕೀಶ್ ಲಿಂಗರಾಜು, ಸೋಮು ,ನಂಜುಂಡ ಶೆಟ್ಟಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular