‘ಯುವಕರ ನಡಿಗೆ ಗರಡಿ ಮನೆಗೆ’ ಹುಣಸೂರಿನ ಜನತೆ ಸದ್ಬಳಕೆ ಮಾಡಿಕೊಳ್ಳಬೇಕಾಗಿ ಮನವಿ
ಹುಣಸೂರು: ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕು ಕಾಟಾ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೈಲ್ವಾನ್ ಹರ್ಷ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಪ್ರಯುಕ್ತ 30 ಜತೆ ಕುಸ್ತಿಯನ್ನು, ದಿನಾಂಕ 01.12.24.ರ ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಮುನೇಶ್ವರ ಕಾವಲ್ ಮೈದಾನದಲ್ಲಿ ಉಚಿತ ಕಾಟಾ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಕುಸ್ತಿ ಪಂದ್ಯಾವಳಿಗೆ ಹುಬ್ಬಳಿ, ಬೆಳಗಾಂ, ಶಿವಮೊಗ್ಗ, ಹಾಗೂ ಪಾಲಹಳ್ಳಿ ಯಿಂದ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಮಾದಹಳ್ಳಿ ಮಠದ ಶ್ರೀ ಶಾಂಭಾಸದಾ ಶಿವಸ್ವಾಮಿ, ಮೈಸೂರು ಕೊಡಗುಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಭಾಗವಹಿಸಲಿದ್ದಾರೆ.
ಈ ಕುಸ್ತಿ ಯನ್ನು ಹುಣಸೂರು ಹಬ್ಬವಾಗಿ ಆಚರಿಸುತ್ತಿದ್ದು, ಯುವಕರ ನಡಿಗೆ ಗರಡಿ ಮನೆಗೆ ಎಂಬ ಉದ್ದೇಶವಿದ್ದು, ಹುಣಸೂರಿನ ಜನತೆ ಸದ್ಬಳಕೆ ಮಾಡಿಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸ್ಟೋರ್ ಬೀದಿ ಪೈಲ್ವಾನ್ ವೆಂಕಟೇಶ್, ಪೈ.ಮರಿಸ್ವಾಮಿ, ಪೈ.ಎಸ್.ಮಹೇಶ್, ನಿವೃತ್ತಾಧಿಕಾರಿ ಬಿ.ಕೆ.ಸ್ವಾಮಿ, ಇದ್ದರು.