ಬೆಳಗಾವಿ : ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆ ಮೇಲಿಂದ ಕೃಷ್ಣಾ ನದಿಗೆ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನಪ್ಪಿದ್ದಾರೆ. ಉಳಿದ ಮೂವರಿಗೆ ಗಾಯಗಳಾಗಿದೆ. ಈ ದುರ್ಘಟನೆ ಕೊಲ್ಹಾಪುರ-ಸಾಂಗ್ಲಿ ಹೆದ್ದಾರಿಯ ಅಂಕಲಿ ಸೇತುವೆ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪ್ರಸಾದ್ ಭಾಲಚಂದ್ರ ಖೇಡೇಕರ್ (35) ಅವರ ಪತ್ನಿ ಪ್ರೇರಣಾ ಪ್ರಸಾದ್ ಖೇಡೇಕರ್ ಹಾಗೂ ವೈಷ್ಣವಿ, ಸಂತೋಷ್ ನಾರ್ವೇಕರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಉಳಿದವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಸಮರ್ಜಿತ್ ಪ್ರಸಾದ ಖೇಡೇಕರ್ (7) ವರದ ಸಂತೋಷ್ ನಾರ್ವೇಕರ್ (19) ಮತ್ತು ಸಾಕ್ಷಿ ಸಂತೋಷ್ ನಾರ್ವೇಕರ್ (42) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಜೈಸಿಂಗ್ ಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.