Saturday, April 19, 2025
Google search engine

Homeಅಪರಾಧಕಾನೂನುರೇಣುಕಾ ಸ್ವಾಮಿ ಕೊಲೆ ಪ್ರಕರಣ: ರಿಟ್ರಿವ್ ಮಾಡಿದ ಫೋಟೋಗೆ ಬಟ್ಟೆ ಮ್ಯಾಚ್ ಮಾಡಲು ಯತ್ನಿಸಿದ್ದಾರೆ :...

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ರಿಟ್ರಿವ್ ಮಾಡಿದ ಫೋಟೋಗೆ ಬಟ್ಟೆ ಮ್ಯಾಚ್ ಮಾಡಲು ಯತ್ನಿಸಿದ್ದಾರೆ : ಸಿವಿ ನಾಗೇಶ್

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮಿನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರಬಲವಾಗಿ ವಾದ ಮಂಡಿಸಿದ್ದು, ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಲಾಗಿರುವ ಫೋಟೋದಲ್ಲಿ ಪ್ಯಾಂಟ್ ಹಾಗೂ ಟಿ-ಶರ್ಟ್ ಗಳನ್ನೇ ಪೊಲೀಸರು ತಿರುಚಿದ್ದಾರೆ. ರಿಟ್ರಿವ್ ಮಾಡಿದ ಫೋಟೋಗೆ ಬಟ್ಟೆ ಮ್ಯಾಚ್ ಮಾಡಲು ಯತ್ನಿಸಿದ್ದಾರೆ ಎಂದು ವಾದಿಸಿದರು.

ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸುವ ವೇಳೆ ಆರೋಪಿಯೊಬ್ಬನ ವೈಟ್ ಶರ್ಟ್, ಬ್ಲೂ ಜೀನ್ಸ್ ಹಾಕಿರುವ ಫೋಟೋ ಇದೆ. ಈ ಬಟ್ಟೆಗಳನ್ನು ಪೊಲೀಸರು ಹಾಜರುಪಡಿಸಿದ್ದಾರೆ.ಪ್ಯಾಂಟನ್ನೇ ಬದಲಿಸಿದ್ದಾರೆ ಎಂದರೆ ತಿರುಚಿರುವುದು ಬಹಳ ಚೆನ್ನಾಗಿದೆ. ಎಂದು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಫೋಟೋ ತೋರಿಸಿ ರೇಣುಕಾ ಸ್ವಾಮಿಯನ್ನು ಕರೆತಂದ ಆರೋಪಿಯ ಫೋಟೋ ತೋರಿಸಿ ವಾದ ಮಂಡಿಸಿದರು.

ಕೃತ್ಯದ ದಿನ ಬಟ್ಟೆಗಳನ್ನು ತೋರಿಸುತ್ತೇನೆ ಎಂದು ಆರೋಪಿ ಹೇಳಿದ್ದ ಜೂನ್ 15ರಂದು ಪೊಲೀಸರು ರಿಕವರಿ ಮಾಡಿರುವುದು ಬೇರೆ ಬಟ್ಟೆ. ಅದಕ್ಕೆ ವಿವರಣೆ ಪಡೆಯಲು ಪೊಲೀಸರು ಮುಂದುವರಿದ ತನಿಖೆಯನ್ನು ಮಾಡಿದ್ದಾರೆ. ಬಟ್ಟೆ ಬದಲಿಸಿದೆ ಹೆಣ ಸಾಗಿಸುವಾಗ ಬೇರೆ ಬಟ್ಟೆ ಹಾಕಿದ್ದೆ ಹೀಗೆಂದು ಪೊಲೀಸರು ಮುಂದುವರಿದ ತನಿಖೆಯಲ್ಲಿ ಹೇಳಿಕೆಯನ್ನು ಪಡೆದಿದ್ದಾರೆ. ರಿಟ್ರಿವ್ ಮಾಡಿದ ಫೋಟೋಗೆ ಬಟ್ಟೆ ಮ್ಯಾಚ್ ಮಾಡಲು ಯತ್ನಿಸಿದ್ದಾರೆ. ಹಾಗಾಗಿನೇ ತನಿಖೆ ಮುಂದುವರೆದ ಭಾಗದಲ್ಲಿ ಈ ತರದ ಹೇಳಿಕೆ ಪಡೆದುಕೊಂಡಿದ್ದೀರಿ ಎಂದು ವಾದಿಸಿದರು.

ನೀಲಿ ಬಣ್ಣದ ಪ್ಯಾಂಟ್ ಎಂದು ಪೊಲೀಸರು ರಿಕವರಿ ಮಾಡಿದ್ದರು. ಆದರೆ ನಾನು ಧರಿಸಿದ್ದು ಬೂದು ಬಣ್ಣದ ಪ್ಯಾಂಟ್ ಎಂದು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಕೃತ್ಯದ ದಿನ ಬಟ್ಟೆಗಳನ್ನು ತೋರಿಸುತ್ತೇನೆ ಎಂದು ಆರೋಪಿ ಹೇಳಿದ್ದ. ಆದರೆ ಜೂನ್ 15ರಂದು ಪೊಲೀಸರು ರಿಕವರಿ ಮಾಡಿರುವುದು ಬಟ್ಟೆಯೇ ಬೇರೆ. ಕೊಲ್ಲುವ ಉದ್ದೇಶವಿದ್ದಿದ್ದರೆ ನಟ ದರ್ಶನ್ ಊಟ ತಂದು ಕೊಡಿ ಅಂತ ಯಾಕೆ ಹೇಳುತ್ತಿದ್ದರ? ನೀರು ತಂದು ಕೊಡಿ ಅಂತ ಹೇಳಿ ಪೊಲೀಸರ ಮುಂದೆ ಹಾಜರುಪಡಿಸಿ ಅಂತ ಯಾಕೆ ಹೇಳುತ್ತಿದ್ದರು? ಅವನ ವಿಡಿಯೋ ಮಾಡಿಕೊಳ್ಳಿ ಹೀಗೆಂದು ದರ್ಶನ್ ಹೇಳುತ್ತಿದ್ದರೆ? ಎಂದು ವಾದಿಸಿದರು.

RELATED ARTICLES
- Advertisment -
Google search engine

Most Popular