Saturday, April 19, 2025
Google search engine

Homeರಾಜ್ಯಮುಡಾ ಹಗರಣ : ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲು ಮುಂದಾದ ಶಾಸಕ ಶ್ರೀವತ್ಸ

ಮುಡಾ ಹಗರಣ : ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಲು ಮುಂದಾದ ಶಾಸಕ ಶ್ರೀವತ್ಸ

ಬೆಂಗಳೂರು : ಮುಡಾದಲ್ಲಿ 50:50 ಅನುಪಾತದಲ್ಲಿ ಅಕ್ರಮವಾಗಿ ನಿವೇಶನಗಳ ಹಂಚಿಕೆ ಆರೋಪಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಶಾಸಕ ಶ್ರೀವತ್ಸ ಅವರು ರಾಜ್ಯಪಾಲ ಥಾವರ ಚಂದ್ ಗೆಹ್ಲೊಟ್ ಅವರಿಗೆ ಮತ್ತೊಂದು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

50:50 ಅನುಪಾತದಲ್ಲಿ ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪದ ವಿಚಾರವಾಗಿ ರಾಜ್ಯಪಾಲರಿಗೆ ಮತ್ತೊಂದು ದೂರು ಕೊಡಲು ಶಾಸಕ ಶ್ರೀವತ್ಸ ಮುಂದಾಗಿದ್ದಾರೆ. 50:50 ಅನುಪಾತದಲ್ಲಿ ಸೈಟ್ ಪರಭಾರೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು ನಿರ್ಮಾಣವಾಗುತ್ತಿರುವ ಕಟ್ಟಡದ ಕೆಲಸವನ್ನು ಸ್ಥಗಿತ ಮಾಡಬೇಕು ಈ ವಿಚಾರದಲ್ಲಿ ರಾಜಪಾಲರ ಮಧ್ಯಪ್ರವೇಶಕ್ಕೆ ನಾನು ಆ ಗ್ರಹ ಮಾಡುತ್ತೇನೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular