Monday, December 2, 2024
Google search engine

Homeರಾಜ್ಯಸುದ್ದಿಜಾಲಡಿ.೫ರಂದು ಹಾಸನದಲ್ಲಿ ಶೋಷಿತ ವರ್ಗಗಳ ಸ್ವಾಭಿಮಾನಿ ಸಮಾವೇಶ;ಸರ್ವ ಜನಾಂಗದವರು ಆಗಮಿಸಿ ಬೆಂಬಲ ನೀಡಿ: ಚರ‍್ನಹಳ್ಳಿಶಿವಣ್ಣ

ಡಿ.೫ರಂದು ಹಾಸನದಲ್ಲಿ ಶೋಷಿತ ವರ್ಗಗಳ ಸ್ವಾಭಿಮಾನಿ ಸಮಾವೇಶ;ಸರ್ವ ಜನಾಂಗದವರು ಆಗಮಿಸಿ ಬೆಂಬಲ ನೀಡಿ: ಚರ‍್ನಹಳ್ಳಿಶಿವಣ್ಣ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರ ವಿರುದ್ದ ಸುಳ್ಳು ಆರೋಪಗಳನ್ನು
ಮಾಡುತ್ತಿರುವ ವಿಪಕ್ಷಗಳ ವರ್ತನೆಯನ್ನು ಖಂಡಿಸಿ ನಮ್ಮ ನಾಡ ನಾಯಕನನ್ನು ಬೆಂಬಲಿಸಿ ಡಿ.೫ರಂದು
ಹಾಸನದಲ್ಲಿ ಶೋಷಿತ ವರ್ಗಗಳ ಸ್ವಾಭಿಮಾನಿ ಸಮಾವೇಶ ನಡೆಸುತ್ತಿದ್ದು ಇದಕ್ಕೆ ಸರ್ವ ಜನಾಂಗದವರು ಆಗಮಿಸಿ ಬೆಂಬಲ ನೀಡಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ ಹೇಳಿದರು.

ಕೆ.ಆರ್.ನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಹಿಂದ ಮುಖಂಡ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಸೇವೆಯನ್ನು ಉಸಿರಾಗಿಸಿಕೊಂಡಿರುವ
ಸಿದ್ದರಾಮಯ್ಯನವರ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಾ ಅವರನ್ನು ನ್ಯಾಯಾಲಯದ ಕಟಕಟ್ಟೆಯಲ್ಲಿ ನಿಲ್ಲಿಸಲು ಸಂಚು ನಡೆಸುತ್ತಿರುವ ರಾಜಕೀಯ ಷಡ್ಯಂತರದ ವಿರುದ್ದ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಜನ ಸೇವೆ ಮಾಡುವ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದ್ದು ಅದನ್ನು ನಾವೆಲ್ಲರೂ ಖಂಡಿಸದಿದ್ದರೆ ಭವಿಷ್ಯದಲ್ಲಿ ಶೋಷಿತರ
ಧ್ವನಿಯನ್ನು ಧಮನ ಮಾಡಲು ಕೆಲವು ದುಷ್ಟ ಶಕ್ತಿಗಳು ಸಂಚು ನಡೆಸುತ್ತಿದ್ದು ಅದನ್ನು ಒಕ್ಕೊರಲಿನಿಂದ ಖಂಡಿಸಬೇಕೆoದು ಮನವಿ ಮಾಡಿದರು. ಡಿ.೫ ರಂದು ಹಾಸನದಲ್ಲಿ ನಡೆಯಲಿರುವ ಐತಿಹಾಸಿಕ ಶೋಷಿತರ ಸಮಾವೇಶಕ್ಕೆ ಸರ್ವ ಜನಾಂಗದವರು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಬೆಂಬಲಿಸಬೇಕು ಎoದು ಕೋರಿದರ ಅಧ್ಯಕ್ಷರು ಸಮಾವೇಶದಲ್ಲಿ ಕೆ.ಆರ್.ನಗರ ತಾಲೂಕಿನಿಂದ ಕನಿಷ್ಠ ೨೦ ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾವೇಶದಲ್ಲಿ ಭಾಗವಹಿಸುವವರಿಗೆ ವಾಹನದ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಸೇರಿ ಯಶಸ್ಸಿಗೆ ದುಡಿಯೋಣ ಎಂದು ನುಡಿದ ಅವರು ಸ್ವಾಭಿಮಾನಿಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಮುಖ್ಯಮಂತ್ರಿ
ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು ಎಂದು ಕೋರಿಕೊಂಡರು. ರಾಜ್ಯ ಕಾಂಗ್ರೆಸ್ ಎಸ್.ಟಿ.ವಿಭಾಗದ
ಉಪಾಧ್ಯಕ್ಷ ಕಲ್ಲಹಳ್ಳಿಶ್ರೀನಿವಾಸ್, ದಲಿತ ಮುಖಂಡ ಹೆಚ್.ಎಸ್.ವೇಣುಗೋಪಾಲ್, ತಾಲೂಕು ಕುಂಬಾರರ
ಸಂಘದ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಿ ಮಾತನಾಡಿದರು.

ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ನಿರ್ದೇಶಕರಾದ ಕೆ.ಹೆಚ್.ಬುಡೀಗೌಡ,
ಕೃಷ್ಣೇಗೌಡ, ನಟರಾಜು, ಗ್ರಾ.ಪಂ. ಸದಸ್ಯ ಕೆ.ಪಿ.ಜಗದೀಶ್, ಮುಖಂಡರಾದ ನವೀದ್, ಮುರಳಿ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular