Monday, December 2, 2024
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ದುಷ್ಕರ್ಮಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ-ನಗದು ಕಳ್ಳತನ

ಕೆ.ಆರ್.ನಗರ: ದುಷ್ಕರ್ಮಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ-ನಗದು ಕಳ್ಳತನ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮನೆಗೆ ನುಗ್ಗಿದ ನಾಲ್ಕು ಮಂದಿ ದುಷ್ಕರ್ಮಿಗಳ ತಂಡವೊಂದು ಬೀರು ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ಕೆ.ಆರ್.ನಗರ ತಾಲೂಕಿನ‌ ಹೆಬ್ಬಾಳು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಬೆಳಗಿನ ಜಾವ ಸುಮಾರು 1.10 ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ಗ್ರಾಮದ ಚಂದ್ರ ಶೇಖರ್ ಎಂಬುವರ ಮನೆ ಬಾಗಿಲನ್ನು‌ ಹಾರೆಯಿಂದ ಒಡೆದು ಮನೆಗೆ ನುಗ್ಗಿ ಈ ದುಷ್ಕೃತ್ಯ ಎಸಗಲಾಗಿದೆ.

ಮನೆಯ ಬೀರುವಿನ ಬಾಗಿಲನ್ನ ಹಾರೆಯಿಂದ ಓಡೆದು ಬೀರುವಿನಲ್ಲಿ ಇಟ್ಟಿದ್ದ ಅಂದಾಜು ಸುಮಾರು 70 ಗ್ರಾಂ.ಚಿನ್ನ ಮತ್ತು 600 ಗ್ರಾಂ ಬೆಳ್ಳಿ ಹಾಗು15 ಸಾವಿರ ನಗದು ಹಣವನ್ನು‌ ದೋಚಿ ಪರಾರಿಯಾಗಿದ್ದಾರೆ
ಘಟನೆಯ ವೇಳೆ ಮನೆಯ ಮಾಲೀಕ ಚಂದ್ರ ಶೇಖರ್ ಮತ್ತು ಅವರ ಮಗ ಸೊಸೆ ಮನೆಯಲ್ಲಿದ್ದರು ಈ ದುಷ್ಕೃತ್ಯ ಕಂಡು ಯಾವುದೇ ಪ್ರತಿರೋಧ ತೋರದೇ ಮನೆಯ ಇನ್ನೊಂದು ರೂಂ ನಲ್ಲಿ ಅವಿತು ಕೊಂಡು ಈ ಮೂರುಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದಕ್ಕು ಮೊದಲು ಇದೇ ತಂಡ ಇದೇ ಗ್ರಾಮದ ಮಲೆ ಮಹದೇಶ್ವರ ಬೆಟ್ಟದ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್, ರೈತ ಸಂಘದ ನಟರಾಜು, ಮಹದೇವ್ ಮತ್ತು ರಾಜೇಂದ್ರ ಅವರ ಮನೆಗಳ ಬೀಗ ಓಡೆದು ಮನೆಗೆ ನುಗ್ಗವ ಪ್ರಯತ್ನ ಮನೆಯವರ ಕಿರುಚಾಟದಿಂದ ವಿಫಲ ಗೊಂಡಿದೆ.

“ಸ್ಥಳಕ್ಕೆ ಬಾರದ ಪೊಲೀಸರು – ಕರೆ ಸ್ವೀಕರಿಸದ 112”

ಈ ಘಟನೆ ನಡೆದ ನಂತರ ಗ್ರಾಮಸ್ಥರು ಕೆ.ಆರ್.ನಗರ‌ ಪೊಲೀಸ್ ಠಾಣೆಗೆ ಕರೆಮಾಡಿದರು ಕೂಡ ಬೆಳಿಗ್ಗೆ 10 ವರಿಗೂ ಯಾವಒಬ್ಬ ಪೊಲೀಸರು ಸ್ಥಳಕ್ಕೆ ಬಾರದೇ ಇರುವುದು ಮತ್ತು ಇಂತಹ ಘಟನೆಗಳು ನಡೆದಾಗ ನೆರವಿಗೆ ಬರಲು ಇರುವ ಸಹಾಯವಾಣಿ 122 ಗೆ ಸಾಕಷ್ಟು ಕರೆ ಮಾಡಿದರು ಕರೆ ಸ್ವೀಕಾರ ಮಾಡದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

” ಬೆಚ್ಚಿ ಬಿದ್ದ ಗ್ರಾಮಸ್ಥರು “

ಮಾರಗೌಡನಹಳ್ಳಿ ಗ್ರಾಮದ ಇತಿಹಾಸದಲ್ಲಿಯೇ ಏಕಕಾಲದಲ್ಲಿಯೇ ನಾಲ್ಕು ಮನೆಗಳಿಗೆ ಹಾರೆಯಿಂದ ಬಾಗಿಲು ಓಡೆದು ಕಳ್ಳತನಕ್ಕೆ ವಿಫುಲ ಯತ್ನ ಮತ್ತು ಇನ್ನೊಂದು ಮನೆಯೊಂದರಲ್ಲಿ ಕಳ್ಳತನವಾಗಿರುವ ಘಟನೆ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಘಟನೆಯ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES
- Advertisment -
Google search engine

Most Popular