Saturday, April 19, 2025
Google search engine

Homeಅಪರಾಧ50 ಸಾವಿರ ಲಂಚ ಸ್ವೀಕರಿಸುವಾಗ ಎಎಸ್‌ಐ ಲೋಕಾಯುಕ್ತ ಬಲೆಗೆ

50 ಸಾವಿರ ಲಂಚ ಸ್ವೀಕರಿಸುವಾಗ ಎಎಸ್‌ಐ ಲೋಕಾಯುಕ್ತ ಬಲೆಗೆ

ದಾವಣಗೆರೆ: ಚಾರ್ಜ್‌ಶೀಟ್‌ನಿಂದ ಇಬ್ಬರ ಹೆಸರು ಕೈಬಿಡಲು ಆರೋಪಿಯಿಂದ ೫೦ ಸಾವಿರ ರೂ. ಲಂಚ ಪಡೆಯುತ್ತಿದ್ದ ಕೆಟಿಜೆ ನಗರ ಪೊಲಿಸ್ ಠಾಣೆಯ ಎಎಸ್‌ಐ ಈರಣ್ಣ, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

೧ ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು, ಮೊದಲ ಕಂತಿನಲ್ಲಿ ಅರ್ಧ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎಎಸ್‌ಐ ಈರಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಗಲಾಟೆಯ ವಿಚಾರವಾಗಿ ಮಣಿಕಂಠ ಆಚಾರ್ಯ, ಅವರ ತಾಯಿ ಭಾಗ್ಯಮ್ಮ ಮತ್ತು ಪತ್ನಿ ಅರ್ಚನಾ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ಈರಣ್ಣ, ಭಾಗ್ಯಮ್ಮ ಮತ್ತು ಅರ್ಚನಾ ಅವರ ಹೆಸರನ್ನು ದೋಷಾರೋಪಪಟ್ಟಿಯಿಂದ ಕೈಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮಣಿಕಂಠ ಆಚಾರ್ಯ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಮಧುಸೂದನ್, ಪ್ರಭು ಬಸೂರಿನ ಹಾಗೂ ಪಿ.ಸರಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಎಎಸ್‌ಐ ಈರಣ್ಣ ಅವರನ್ನು ಲಂಚದ ಹಣ ಸಮೇತ ವಶಕ್ಕೆ ಪಡೆಯಲಾಗಿದೆ.

RELATED ARTICLES
- Advertisment -
Google search engine

Most Popular