Wednesday, April 16, 2025
Google search engine

Homeರಾಜ್ಯಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

ರಾಮನಗರ: ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್‌ ವೇ, ಟೋಲ್‌ ಸಂಗ್ರಹಣೆಯಲ್ಲಿ ಸೂಪರ್‌ ಫಾಸ್ಟ್‌ ಎನಿಸಿದ್ದು, ಟೋಲ್‌ ಸಂಗ್ರಹಣೆ ಆರಂಭವಾದ ಮೊದಲ ವರ್ಷದಲ್ಲೇ 438.28 ಕೋಟಿ ರೂ. ಭರ್ಜರಿ ಟೋಲ್‌ ಶುಲ್ಕ ಸಂಗ್ರಹಿಸಿದೆ.

ಕಡಿಮೆ ಅವಧಿಯಲ್ಲೇ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿದ್ದ ಶೇ.10ರಷ್ಟು ಹಣ ಟೋಲ್‌ ಶುಲ್ಕದ ಮೂಲಕ ಎನ್‌ಎಚ್‌ಎಐಗೆ ಜಮೆಯಾಗಿದೆ. ಈ ಸಂಗತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಖಚಿತಪಡಿಸಿದೆ.

2023ರ ಎ.1ರಿಂದ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಕಣಿ ಮಣಿಕೆ ಬಳಿ, ಮೈಸೂರಿನಿಂದ ಬೆಂಗಳೂರಿನ ಕಡೆಗೆ ಪ್ರಯಾಣಿಸುವವರಿಗೆ ಶೇಷಗಿರಿಹಳ್ಳಿ ಬಳಿ, 2023ರ ಜು. 1ರಿಂದ 2ನೇ ಹಂತದ ರಸ್ತೆ (ನಿಡಘಟ್ಟದಿಂದ ಮೈಸೂರು)ಗೆ ಶ್ರೀರಂಗಪಟ್ಟಣದ ಗಣಂಗೂರು ಟೋಲ್‌ ಪ್ಲಾಜಾ ಬಳಿ ಟೋಲ್‌ ಸಂಗ್ರಹಣೆ ಆರಂಭಿಸಲಾಯಿತು.

ಕಳೆದ ಸಾಲಿನಲ್ಲಿ 270 ಕೋಟಿ ರೂ.

ಎಕ್ಸ್‌ಪ್ರೆಸ್‌ ವೇನಲ್ಲಿ ಪೂರ್ಣ ಪ್ರಮಾಣದ ಟೋಲ್‌ ಸಂಗ್ರಹಣೆ ಆರಂಭವಾಗಿದ್ದು 2023 ಜು.1ರಿಂದ, 2023-24ನೇ ಸಾಲಿನಲ್ಲಿ 270.96 ಕೋಟಿ ರೂ., 2024-25ನೇ ಸಾಲಿನಲ್ಲಿ 167.32 ಕೋಟಿ ರೂ., ಪ್ರಸಕ್ತ ಹಣಕಾಸಿನ ವರ್ಷ ಪೂರ್ಣಗೊಳ್ಳಲು ಇನ್ನೂ 4 ತಿಂಗಳು ಇದ್ದು, ಟೋಲ್‌ ಸಂಗ್ರಹಣೆ ಇನ್ನಷ್ಟು ಹೆಚ್ಚಾಗಲಿದೆ. 119 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕೆ ಎನ್‌ಎಚ್‌ಎಐ ರೂ. 4,473 ಕೋಟಿ ಖರ್ಚು ಮಾಡಿದೆ.

RELATED ARTICLES
- Advertisment -
Google search engine

Most Popular