ಹನೂರು : ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ್ ಶಿಬಿರಕ್ಕೆ ಡಿಎಚ್ಒ ವಿಶ್ವೇಶ್ವರಯ್ಯ ಚಾಲನೆ ನೀಡಿದರು. ವಿಕಲಚೇತನ ಹಾಗು ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಂಗವಿಕಲರ ಪುನರ್ ವಸತಿ ಕೇಂದ್ರ ಚಾಮರಾಜನಗರ ಜಿಲ್ಲೆ ಇವರ ವತಿಯಿಂದ ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಯುಡಿ ಐಡಿ ಕಾರ್ಡ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿಯಮಾನುಸಾರ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸುವ ಮುಖ್ಯ ಉದ್ದೇಶದಿಂದ ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿ ಅವರಿಗೆ ಸರ್ಕಾರದಿಂದ ದೊರೆಯುವ ಯುಡಿಐಡಿ ಕಾರ್ಡ ನೀಡಲು ಈ ಶಿಬಿರವನ್ನುಚಾಲನೆ ನೀಡಲಾಗುತ್ತಿದ್ದು
ಈ ಕಾರ್ಯಕ್ರಮವನ್ನು ಎಲ್ಲಾ ವಿಕಲಚೇತನರು ಸದುಪಯೋಗ ಪಡಿಸಿಕೂಳ್ಳುವಂತೆ ಕರೆನೀಡಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್ , ಕುಷ್ಟ ರೋಗ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ಸುರೇಶ್, ನೋಡೆಲ್ ಅಧಿಕಾರಿ ವೆಂಕಟೇಶ್, ಹನೂರು ಪ್ರಾಥಮಿಕ ಕೇಂದ್ರದ ಡಾ ಪುಷ್ಟರಾಣಿ ,ನಿಂಬೇಸ್ ಬಿ ಐ ಇಆರ್ ಟಿ ಕೃಷ್ಣ, ಅಧಿಕಾರಿ ಕವಿರತ್ನ ಡಾ ಮಹದೇವಪ್ರಸಾದ್, ಡಾ. ವಾಸು ಡಾ ನಿಕೇತಾ, ಡಾ.ಶೇಖರ್ ರಾಜ್ ಹಾಜರಿದ್ದರು.