ಚಾಮರಾಜನಗರ: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಾದ ಎಸ್.ಆರ್. ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಂದು ಖ್ಯಾತಿಯಾಗಿರುವ ನಾಡಿನ ಹೆಮ್ಮೆಯ ಶ್ರೇಷ್ಠ ದಿಗ್ಗಜರು ಎಂದು ಕನ್ನಡ ಸಾಹಿತ್ಯ ಪರಿಷತು ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 35ನೇ ದಿನದ ಕಾರ್ಯಕ್ರಮದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕುರಿತು ಮಾತನಾಡಿದರು.

ಜಗತ್ತಿನಲ್ಲಿ ಹೆಸರು ಮಾಡಿರುವ ಕನ್ನಡದ ಚಿತ್ರ ನಿರ್ದೇಶಕರು ಪುಟ್ಟಣ್ಣ ಕಣಗಾಲ್. ಅವರ ಚಲನಚಿತ್ರೋತ್ಸವ 1980 ಇಸವಿಯಲ್ಲಿ ದೆಹಲಿಯಲ್ಲಿ ಪ್ರಪ್ರಥಮ ಬಾರಿಗೆ ನಡೆಯಿತು. ಕನ್ನಡಿಗರಾದ ನಾವೆಲ್ಲರೂ ಹೆಮ್ಮೆಯಪಡುವ ಸಂಗತಿಯಾಗಿದೆ. ಅವರ ಚಲನಚಿತ್ರ ರಷ್ಯಾದಲ್ಲಿ ಪ್ರದರ್ಶನ ಕಂಡಿತು. ಪುಟ್ಟಣ್ಣನವರ ದೂರದೃಷ್ಟಿ ಚಿಂತನೆ ಭಾವನೆಗಳು ವಿಶೇಷವಾದದ್ದು. ಕನ್ನಡ ಚಿತ್ರರಂಗದ ಮೇರು ಪರ್ವತ ಪುಟ್ಟಣ್ಣನವರು. ಅವರು ಕುಟುಂಬ ಮೈಸೂರು ಜಿಲ್ಲೆಯ ಕಣಗಾಲ್‌ದಲ್ಲಿದೆ. ಪುಟ್ಟಣ್ಣಕಣಗಾಲ್ ಅವರಿಗೆ ಚಾಮರಾಜನಗರಕ್ಕೂ ಅವಿಭಾವ ಸಂಬಂಧವಿದೆ . ಅವರ ಶಿಷ್ಯರಾಗಿ ನಿರ್ದೇಶಕರಾಗಿರುವ ರಾಮನಾಥ ಋಗ್ವೇದಿ, ರಾಜಶೇಖರ್ ಚಾಮರಾಜನಗರದವರು. ಅವರ ಗೆಜ್ಜೆ ಪೂಜೆ ಶರಪಂಜರ ನಾಗರಹಾವು ಪಡುವಾರಳ್ಳಿ ಪಾಂಡವರು ಅಮೃತಗಳಿಗೆ ಮರೆಯಲಾಗದ ಚಲನಚಿತ್ರಗಳು ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ ಮಾತನಾಡಿ, ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ಸಾಮಾನ್ಯವಾಗಿ ಕಲೆ,. ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಿನಿಮಾಕ್ಕೆ ಹೊಸರೂಪ ತಂದರು.
ಗಾಯಕರಾದ ಮುತ್ತುರಾಜು ಚಿತ್ರ ಕಲಾವಿದ ಮಹಮ್ಮದ್ ಗೌಸ್ ನಡೆಸಿಕೊಟ್ಟ ಪುಟ್ಟಣ್ಣನವರ ಚಲನಚಿತ್ರ ಗೀತೆಗಳಿಗೆ ಕುಂಚ ಗಾಯನ ಕಾರ್ಯಕ್ರಮ ಮನಸೂರೆಗೊಂಡಿತು. ಕಲಾವಿದ ರೂಪಿಸಿದ ಪುಟ್ಟಣ್ಣ ರವರ ಚಿತ್ರವನ್ನು ಸಭಿಕರಿಗೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿಜಧ್ವನಿಗೋವಿಂದರಾಜು, ಬಸವರಾಜನಾಯಕ, ಪಣ್ಯದಹುಂಡಿರಾಜು, ಮಹೇಶ್‌ಗೌಡ, ಸರಸ್ವತಿ, ನಂಜುಂಡಶೆಟ್ಟಿ, ಮುತ್ತಿಗೆಗೋವಿಂದರಾಜು, ಶಿವಲಿಂಗಮೂರ್ತಿ, ಚಾ. ರಾಜ್‌ಗೋಪಾಲ್, ರವಿಚಂದ್ರಪ್ರಸಾದ್ ಕಹಳೆ ಇತರರು ಹಾಜರಿದ್ದರು.