ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣದ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ನೂತನ ಅಧ್ಯಕ್ಷರಾಗಿ ಕೆ.ಆರ್.ಶ್ಯಾಮಸುಂದರ್ ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಕೆ.ಆರ್.ಶ್ಯಾಮಸುಂದರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯ ಗುರುರಾಜ್ ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಜೆ.ಮಾಲತಿ ಅವರು ಅಧ್ಯಕ್ಷರಾಗಿ ಕೆ.ಆರ್.ಶ್ಯಾಮಸುಂದರ್ ಮತ್ತು ಉಪಾಧ್ಯಕ್ಷರಾಗಿ ಭಾಗ್ಯ ಗುರುರಾಜ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಹಕಾರ ಇಲಾಖೆಯ ಪವನ್ ಕುಮಾರ್, ಮಹದೇವ್, ಸಂಘದ ನಿರ್ದೇಶಕರುಗಳಾದ ಎಂ.ಎಸ್.ನರಸಿಂಹ, ಶಶಿಕುಮಾರ್, ಮಂಜುನಾಥ್, ಕೆ.ಎಸ್.ರಾಜೇಶ್, ಎಂ.ಎಸ್.ಕುಮಾರ್, ಶಿವರಾಜ್ ಕುಮಾರ್, ಶೃತಿ ಶ್ರೀನಿವಾಸಗೌಡ, ಮಂಜುಳಾ ಕನಕರಾಜು, ಎಸ್.ಕೆ.ಕಮಲ, ಸಿಇಓ ಸಿಂಧು ಮಂಜುನಾಥ್, ಸಿಬ್ಬಂದಿ ಮಮತಾ ಪಾಲ್ಗೊಂಡಿದ್ದರು.