Saturday, April 19, 2025
Google search engine

Homeಅಪರಾಧಬಸ್‌ನಿಂದ ಬಿದ್ದುವಿದ್ಯಾರ್ಥಿ ಸಾವು

ಬಸ್‌ನಿಂದ ಬಿದ್ದುವಿದ್ಯಾರ್ಥಿ ಸಾವು

ಮೈಸೂರು: ಪ್ರವಾಸಕ್ಕೆ ಬಂದಿದ್ದ ತಮಿಳುನಾಡು ಮೂಲದ ವಿದ್ಯಾರ್ಥಿಯೊಬ್ಬ ಬಸ್‌ನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿ ನಿನ್ನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ದೀನಾ ದಯಾಳ್(೨೧) ಎಂದು ಗುರುತಿಸಲಾಗಿದ್ದು, ಬೈಲಕುಪ್ಪೆ ಗೋಲ್ಡನ್ ಟೆಂಪಲ್ ವೀಕ್ಷಿಸಲು ಹೋಗುವಾಗ ಈ ಅವಘಡ ಸಂಭವಿಸಿದೆ.
ಬಸ್ ಡೋರ್ ಲಾಕ್ ಆಗದ ಹಿನ್ನೆಲೆ ವಿದ್ಯಾರ್ಥಿ ಕೆಳಗೆ ಬಿದಿದ್ದು, ಈ ವೇಳೆ ರಸ್ತೆಯ ಪಕ್ಕದಲ್ಲಿದ್ದ ಲೈಟ್ ಕಂಬಕ್ಕೆ ತಾಗಿ ಬಲವಾದ ಪೆಟ್ಟು ಬಿದ್ದು ದೀನಾ ದಯಾಳ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular