Saturday, April 19, 2025
Google search engine

Homeರಾಜ್ಯಸುದ್ದಿಜಾಲಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಬಾಲಸುಬ್ರಹ್ಮಣ್ಯಂ ಆಯ್ಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಬಾಲಸುಬ್ರಹ್ಮಣ್ಯಂ ಆಯ್ಕೆ

ಚಾಮರಾಜನಗರ: ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಶಂಕರಪುರ ಶ್ರೀರಾಮ ಮಂದಿರದ ಆವರಣದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಬಾಲಸುಬ್ರಹ್ಮಣ್ಯಂ ಹಾಗೂ ರಾಜ್ಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸ್ಕಂದ ರವರನ್ನೂ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾಗಿರುವ ಬಾಲಸುಬ್ರಹ್ಮಣ್ಯಂ ರವರು ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಸಮಾಜಕ್ಕೆ ಬಹಳ ಸಂತೋಷವನ್ನುಂಟು ಮಾಡಿದೆ . ಅವರ ಸಂಘಟನೆ, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮನೋಭಾವ ಗೆಲುವಿಗೆ ಸಹಕಾರಿಯಾಗಿದೆ. ಸೇವೆ ಎನ್ನುವುದು ಭಗವಂತನ ಕಾರ್ಯ. ಕೈಲಾದ ಮಟ್ಟಿಗೆ ಸರ್ವರಿಗೂ ಸಹಾಯ ಮಾಡುವ ಮೂಲಕ ನಮ್ಮ ಜೀವನವನ್ನು ಪವಿತ್ರ ಗೊಳಿಸಿಕೊಳ್ಳೋಣ. ಸೇವೆಯ ಮೂಲಕ ಎಲ್ಲರೂ ಸಂತೋಷವನ್ನು ಕಾಣುವ ಜೊತೆಗೆ ಆತ್ಮ ಸಂತೋಷವೂ ಉಂಟಾಗುತ್ತದೆ. ಒಳ್ಳೆಯದನ್ನೇ ಬಯಸಿ, ಒಳ್ಳೆಯದನ್ನೇ ಸದಾಕಾಲ ನಿರ್ವಹಿಸಿ ಗೌರವ ತರುವ ಕೆಲಸವನ್ನು ಮಾಡೋಣ ಎಂದರು.

ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿಗಳಾದ ಬಾಲಸುಬ್ರಹ್ಮಣ್ಯ ಮಾತನಾಡಿ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ ಸೇವಾ ಭಾರತಿ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಸ್ಕಂದ ಅವರಿಗೆ ಭವಿಷ್ಯದಲ್ಲಿ ಮತ್ತಷ್ಟು ಉಜ್ವಲವಾಗಿ, ತಮ್ಮ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕು. ಸತತ ಪರಿಶ್ರಮ, ಏಕಾಗ್ರತೆ, ಕೌಶಲ್ಯ ಹಾಗೂ ಗುರುಭಕ್ತಿಯ ಮೂಲಕ ಉತ್ತಮ ಬೆಳವಣಿಗೆಯನ್ನು ಹೊಂದುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು .

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿಎಂ ಹೆಗಡೆ ಮಾತನಾಡಿ ಜನವರಿ 18 ,19ರಂದು ಬೆಂಗಳೂರಿನಲ್ಲಿ ವೈಭವದ ವಿಶ್ವಾಮಿತ್ರ ಹೆಸರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಮ್ಮೇಳನ ಜರುಗಲಿದೆ. ಪ್ರತಿ ಮನೆಯಿಂದಲೂ ಎಲ್ಲರೂ ಸಮ್ಮೇಳನಕ್ಕೆ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷರಾದ ಮಮತಾ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜು, ಮುಖಂಡರಾದ ಚಂದ್ರಶೇಖರ್, ಸತೀಶ್ ,ರಾಧಾಕೃಷ್ಣ, ಪ್ರದೀಪ್, ಮಂಜು ,ಅರ್ಚನಾ, ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular