Sunday, April 20, 2025
Google search engine

Homeಬ್ರೇಕಿಂಗ್ ನ್ಯೂಸ್ಕಾಡು ಗೊಲ್ಲರಿಂದ ಸೂತಕದ ಸಂಪ್ರದಾಯ ಆಚರಣೆ ಬಾಣಂತಿಯನ್ನು ಊರಿನಿಂದ ಹೊರಗಿಟ್ಟ ಸಮುದಾಯ

ಕಾಡು ಗೊಲ್ಲರಿಂದ ಸೂತಕದ ಸಂಪ್ರದಾಯ ಆಚರಣೆ ಬಾಣಂತಿಯನ್ನು ಊರಿನಿಂದ ಹೊರಗಿಟ್ಟ ಸಮುದಾಯ

ತುಮಕೂರು: ತುಮಕೂರು ಸಮೀಪದ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಮೌಡ್ಯಾ ಚರಣೆ ನಡೆದಿದೆ. ಊರ ಹೊರಗಿನ ಗುಡಿಸಿಲಿನಲ್ಲಿ ಬಾಣಂತಿ ಮಗು ಏಕಾಂಗಿಯಾಗಿ ವಾಸ ಮಾಡುತ್ತಿದ್ದಾರೆ.ವಸಂತ ಕುಟುಂಬದವರು ಬಾಣಂತಿಯನ್ನು ಊರಿನಿಂದ ಹೊರಗೆ ಇಟ್ಟಿದ್ದಾರೆ.

ವಸಂತ ಎಂಬುವವರು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಐದು ದಿನಗಳ ಹಿಂದೆ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಹೆಣ್ಣು ಮಗು ಬದುಕುಳಿದಿದ್ದು ಗಂಡು ಮಗು ಸಾವನ್ನಪ್ಪಿದೆ ಈಗ ಬದುಕುಳಿದಿರುವ ನವಜಾತ ಹೆಣ್ಣು ಮಗುವಿನೊಂದಿಗೆ ಅವರು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ.

ಹೆರಿಗೆ ಮುಗಿಸಿ ಬಂದ ನಂತರ ವಸಂತ ರವರನ್ನು ಊರಿನಿಂದ ಆಚೆ ಇಟ್ಟಿದ್ದಾರೆ. ಸಣ್ಣ ಗುಡಿಸಲನ್ನು ಮಾಡಿ ಅದರಲ್ಲಿ ಬಾಣಂತಿ ಮಗುವನ್ನು ಇಟ್ಟಿರುವ ಕಾಡು ಗೊಲ್ಲ ಸಂಪ್ರದಾಯದವರು ನಮ್ಮ ದೇವರಿಗೆ ಸೂತಕ ಆಗಲ್ಲ ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಆಗಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಹಿಂದಿನಿಂದಲೂ ಈ ಆಚರಣೆ ಮಾಡಿಕೊಂಡು ನಾವು ಬರುತ್ತಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular