Saturday, April 19, 2025
Google search engine

Homeಅಪರಾಧಮಹಿಳೆಯರ ನಗ್ನ ಚಿತ್ರ ಬರೆದು ಕಿರುಕುಳ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಗ್ರಾಮದ ಮುಖಂಡ

ಮಹಿಳೆಯರ ನಗ್ನ ಚಿತ್ರ ಬರೆದು ಕಿರುಕುಳ: ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಗ್ರಾಮದ ಮುಖಂಡ

ನಂಜನಗೂಡು: ಮಹಿಳೆಯರು, ಯುವತಿಯರ ಬಗ್ಗೆ ಅಸಭ್ಯವಾಗಿ ಲೈಂಗಿಕ ಚಿತ್ರಗಳನ್ನ ಬಿಡಿಸಿ ಹೆಸರುಗಳನ್ನ ನಮೂದಿಸಿ ಮನೆಗಳ ಮುಂದೆ ಇಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ವ್ಯಸನಿಯೊಬ್ಬನನ್ನು ಗ್ರಾಮಸ್ಥರು ಹೊಂಚು ಹಾಕಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ವರದರಾಜಸ್ವಾಮಿ ಬಡಾವಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕೃತ್ಯ ಎಸಗಿದವನು ಇದೇ ಬಡಾವಣೆ ನಿವಾಸಿ ಹಾಗೂ ಗ್ರಾಮದ ಮುಖಂಡ ಶಿವಣ್ಣ (೫೪) ಎನ್ನಲಾಗಿದೆ.
ಗ್ರಾಮದಲ್ಲಿ ಸಮಸ್ಯೆಗಳು ಶುರುವಾದಾಗ ನ್ಯಾಯಕ್ಕಾಗಿ ನಿಲ್ಲುತ್ತಿದ್ದ ಮುಖಂಡನಿಂದಲೇ ಈ ಕೃತ್ಯ ನಡೆದಿದೆ. ಹಲವಾರು ದಿನಗಳಿಂದ ಈ ವ್ಯಸನಿಯನ್ನು ಹಿಡಿಯಲು ಗ್ರಾಮಸ್ಥರು ಹೊಂಚು ಹಾಕಿದ್ದು ನಿನ್ನೆ ರಾತ್ರಿ ರೆಡ್ ಹ್ಯಾಂಡಾಗಿ ಈತ ಸಿಕ್ಕಿಬಿದ್ದಿದ್ದಾನೆ. ಸಾಕ್ಷಿ ಸಮೇತ ಈತನನ್ನು ಹಿಡಿದ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ವರದರಾಜಸ್ವಾಮಿ ಬಡಾವಣೆ ಮಹಿಳೆಯರ ಬಗ್ಗೆ ಅಸಭ್ಯವಾಗಿ ಚಿತ್ರಗಳನ್ನ ಬಿಳಿ ಅದರನ್ನು ಮಹಿಳೆಯರ ಹೆಸರುಗಳನ್ನ ಬರೆದು ಅವರ ಮನೆಗಳ ಮುಂದೆ ಇಡುತ್ತಿದ್ದ. ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದವು. ಕೆಲವು ಮದುವೆ ಸಂಬಂಧಗಳೂ ಸಹ ಮುರಿದು ಬಿದ್ದಿದ್ದವು. ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ಅಸಭ್ಯ ಚಿತ್ರಗಳುಳ್ಳ ಚೀಟಿಗಳು ಗ್ರಾಮವನ್ನೇ ಚಿಂತೆಗೆ ಈಡು ಮಾಡಿತ್ತು. ಕೊನೆಗೂ ಸೈಕೋಪಾತ್‌ನನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಗ್ರಾಮಸ್ಥರು ಹಲವಾರು ದಿನಗಳಿಂದ ಹೊಂಚು ಹಾಕುತ್ತಿದ್ದರು.

ನಿನ್ನೆ ತಡರಾತ್ರಿ ಸೈಕಲ್‌ನಲ್ಲಿ ಬಂದ ಶಿವಣ್ಣ ಒಂದು ಮನೆ ಮುಂದೆ ಚೀಟಿಯನ್ನ ಇಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಿಸಿ ಬಿಸಿ ಕಜ್ಜಾಯಗಳನ್ನ ಕೊಟ್ಟ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಶಿವಣ್ಣನ ವಿರುದ್ದ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಿರುವ ಹುಲ್ಲಹಳ್ಳಿ ಠಾಣೆ ಪೊಲೀಸರು ಕಂಬಿ ಎಣಿಸಲು ಕಳಿಸಿದ್ದಾರೆ.

RELATED ARTICLES
- Advertisment -
Google search engine

Most Popular