ತುಮಕೂರು: ವಿದ್ಯುತ್ ಪ್ರವಹಿಸಿ 19 ಕುರಿಗಳು ಸಾವನಪ್ಪಿದ್ದು ಈ ಘಟನೆ ಪಾವಗಡ ತಾಲೂಕಿನ ಶ್ರೀರಂಗಪುರ ಗ್ರಾಮದಲ್ಲಿ ನಡೆದಿದೆ. ರೈತ ಮಂಜುನಾಥ್ ಎಂಬವರಿಗೆ ಸೇರಿದ ಕುರಿಗಳಾಗಿದ್ದು ರಾತ್ರಿ ಸುರಿದ ಮಳೆಯ ಪರಿಣಾಮ ಕುರಿ ಶೆಡ್ ಪಕ್ಕದಲ್ಲಿ ಇದ್ದ ಕಂಬದಿಂದ ವಿದ್ಯುತ್ ಪ್ರವಹಿಸಿದೆ. ಕುರಿಗಳ ಸಾವಿನಿಂದ ರೈತ ಮಂಜುನಾಥ್ ಕಂಗಾಲಾಗಿದ್ದಾರೆ. ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.