Saturday, April 19, 2025
Google search engine

Homeರಾಜ್ಯಸುದ್ದಿಜಾಲಎಸ್.ಎಂ ಕೃಷ್ಣರವರು ನಮ್ಮೊಂದಿಗೆ ಇಲ್ಲದಿರುವುದು ನೋವಿನ ಸಂಗತಿ: ಸಂತಾಪ ವ್ಯಕ್ತಪಡಿಸಿದ ಕೆ.ಗಣೇಶ್ ಗೌಡ

ಎಸ್.ಎಂ ಕೃಷ್ಣರವರು ನಮ್ಮೊಂದಿಗೆ ಇಲ್ಲದಿರುವುದು ನೋವಿನ ಸಂಗತಿ: ಸಂತಾಪ ವ್ಯಕ್ತಪಡಿಸಿದ ಕೆ.ಗಣೇಶ್ ಗೌಡ

ಹುಣಸೂರು: ನಾಡುಕಂಡ ಅಪುರೂಪದ ಅಪ್ರತಿಮ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಎಸ್.ಎo. ಕೃಷ್ಣರನ್ನು ಕಳದುಕೊಂಡು ಇಡೀ ರಾಜ್ಯ ಶೋಕದಲ್ಲಿ ಮುಳುಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಗಣೇಶ್ ಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಐವತ್ತರ ರಾಜಕೀಯ ಜೀವನದಲ್ಲಿ.ರಾಜ್ಯ ಮತ್ತು ದೇಶದ ಅಭಿವೃದ್ಧಿ ಬಗ್ಗೆಯೇ ಚಿಂತೆ ಮಾಡಿ, ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಕೇವಲ ಐದು ವರುಷದಲ್ಲಿ ಮಾಡಿದ ಸಾಧನೆ ಯಾರೂ ಮರೆಯುವಂತಿಲ್ಲವೆಂದರು.

ವಿದ್ಯೆ ಮತ್ತು ತಾಳ್ಮೆಯಲ್ಲಿ ಪಾಂಡಿತ್ಯ ಪಡೆದಿದ್ದ ಅವರು ಜಾತಿಯ ಸಂಕೋಲೆಯಿಂದ ಹೊರಗಿದ್ದು. ರಾಜ್ಯದ ಉದ್ದಗಲಕ್ಕೂ ನೀರಾವರಿ, ರಸ್ತೆ, ಮಹಿಳೆಯರ ಸುರಕ್ಷತೆ, ಆರ್ಥಿಕ ಭದ್ರತೆ, ಐಟಿ-ಬಿಟಿ, ರೈತರ ಡಿಜಿಟಲೀಕರಣಕ್ಜೆ ಒತ್ತು, ಮಕ್ಕಳ ಬಿಸಿಯೂಟದ ಯೋಜನೆಗಳು ಅವರನ್ನ ಜೀವಂತವಾಗಿರಿಸಿವೆ ಎಂದರು.

ಅಂತಹ ಮುತ್ಸದಿ ರಾಜಕಾರಣಿ, ಸರಳ ಜೀವಿ, ಹಾಗೂ ಎಂದೂ ದ್ವೇಷದ ರಾಜಕಾರಣ ಮಾಡದ ಅವರು ಇಂದು ಎಂದೆಂದೂ ಮರೆಯದ ಮಾಣಿಕ್ಯ. ಆದರೆ ಅಂತ ಭಾವನಾತ್ಮಕ ಮಗುವಿನಂತಹ ಮೃದು ಸ್ವಭಾವದ ಎಸ್ ಎಂ ಕೃಷ್ಣರವರು ನಮ್ಮೊಂದಿಗೆ ಇಲ್ಲದಿರುವುದು ನೋವಿನ ಸಂಗತಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular