ಮಡಿಕೇರಿ: ಕೊಡಗು ಮೂಲದ ವೀರ ಸೇನಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಮಾನ ಮಾಡಿರುವುದನ್ನು ಖಂಡಿಸಿ ಸರ್ವ ಜನಾಂಗಗಳ ಒಕ್ಕೂಟದಿಂದ ಡಿಸೆಂಬರ್ 12ರಂದು ಕೊಡಗು ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಥಮ ಮಹಾ ದಂಡನಾಯಕ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ಕೇವಲ ಆರು ತಿಂಗಳ ಕಾಲ ಬಾರ್ ಕೌನ್ಸಿಲ್‌ನಿಂದ ಹೊರಗಿಡಲಾಗಿದೆ. ಆದರೆ ಆ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲವಾದರೂ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಗುರುವಾರ ಸರ್ವಜನಾಂಗದ ಒಕ್ಕೂಟ ಜಿಲ್ಲಾ ಬಂದ್‌ಗೆ ಕರೆ ನೀಡಿದೆ.
ಕೊಡಗು ಜಿಲ್ಲೆಯ ಅನುದಾನ ರಹಿತ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಕೊಡಗು ಜಿಲ್ಲಾ ಬಂದ್ ಗೆ ಬೆಂಬಲ ನೀಡಿವೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧಾಹ್ನ 12 ಗಂಟೆಯವರೆಗೆ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ.