Monday, April 21, 2025
Google search engine

Homeರಾಜ್ಯಸುದ್ದಿಜಾಲಬೋನಿಗೆ ಬೀಳದ ಚಿರತೆ : ಭಯದಲ್ಲಿ ಗ್ರಾಮಸ್ಥರು

ಬೋನಿಗೆ ಬೀಳದ ಚಿರತೆ : ಭಯದಲ್ಲಿ ಗ್ರಾಮಸ್ಥರು

ಮಂಡ್ಯ: ತಾಲೂಕಿನ ಗಾಣದಾಳು ಚಂದಗಾಲು ರಸ್ತೆ ಮಧ್ಯ ಭಾಗದಲ್ಲಿ (ಮುಂಡ ಬಸವೇಶ್ವರ ದೇವಸ್ಥಾನದ ಪಕ್ಕ ಹಾಗೂ ಕೋಳಿ ಫಾರಂ ಹತ್ತಿರ) ರಸ್ತೆಯಲ್ಲಿ ನಿನ್ನೆ ರಾತ್ರಿ ಚಿರತೆಯು ಮತ್ತೆ ಪ್ರತ್ಯಕ್ಷವಾಗಿದೆ.

ಚಂದಗಾಲು ಗ್ರಾಮದಿಂದ ಗಾಣದಾಳು ಗ್ರಾಮಕ್ಕೆ ರಸ್ತೆಯಲ್ಲಿ ಮಧ್ಯರಾತ್ರಿ ಕಾರಿನಲ್ಲಿ ಹೋಗುತ್ತಿದ್ದಾಗ ಚಿರತೆಯು ಪ್ರತ್ಯಕ್ಷವಾಗಿದೆ. ಈ ಕುರಿತು ಪ್ರತ್ಯಕ್ಷದರ್ಶಿ ಕೋಳಿ ಫಾರಂ ಮಾಲೀಕ ಮಲ್ಲೇಶ್ ಮಾತನಾಡಿ, ೧೫ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಾಗ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿತ್ತು. ಅವರು ಬಂದು ಕಬ್ಬಿನ ಗದ್ದೆ ಹತ್ತಿರ ಬೋನನ್ನು ಇಟ್ಟಿದ್ದರು.

ಆದರೆ ಒಂದು ನಾಯಿ ಹಾಗೂ ಒಂದು ಬೆಕ್ಕನ್ನು ತಿಂದು ಅಲ್ಲಿಂದ ಪರಾರಿಯಾಗಿದೆ. ಆದರೆ ಬೋನಿಗೆ ಮಾತ್ರ ಚಿರತೆ ಬೀಳಲಿಲ್ಲ ಎಂದು ಹೇಳಿದರು.
ಅಲ್ಲದೇ, ನಮ್ಮ ಲ್ಯಾಬ್ರೊ ನಾಯಿಯನ್ನು ಸಹ ಚಿರತೆಯ ತಿಂದು ಹೋಗಿದೆ. ಕಬ್ಬು ಕಡಿಯುವ ಕಾರ್ಮಿಕರ ಮೇಕೆಯನ್ನು ಸಹ ತಿಂದು ಹೋಗಿದೆ.
ಆದರೆ, ಇನ್ನೂ ಸಹ ಚಿರತೆಯು ಬೋನಿಗೆ ಬಿದ್ದಿಲ್ಲ. ಚಿರತೆಯು ಈ ಪ್ರದೇಶವನ್ನು ಬಿಟ್ಟು ಬೇರೆಯಲ್ಲೂ ಸಹ ಹೋಗಿಲ್ಲ ಎಂದು ಹೇಳಿದರು.
ಹೊಳಲು ಗ್ರಾಮದ ರಾಮ್ ಸಿದ್ಧಯ್ಯ (ಹೊಳಲು ಗ್ರಾಮದ ಕೆರೆ ಏರಿಯ ಪಕ್ಕ) ಗದ್ದೆಯಲ್ಲೂ ಸಹ ಈ ದಿನ ಬೆಳಗ್ಗೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಎಂದು ವಿಷಯ ತಿಳಿಸಿದ್ದಾರೆ.

ಈ ವಿಷಯವನ್ನು ತಿಳಿದ ಮಂಡ್ಯ ಅರಣ್ಯ ಸಹಾಯಕ ಸಂರಕ್ಷಣಾ ಅಧಿಕಾರಿ ಮಹಾದೇವಸ್ವಾಮಿ ಮಾತನಾಡಿ, ನಾವು ಬೋನನ್ನು ಗದ್ದೆಯಲ್ಲಿ ಇಟ್ಟಿದ್ದೇವೆ.
ಅರಣ್ಯ ಸಿಬ್ಬಂದಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ರೈತರು ಗದ್ದೆಗೆ ನೀರು ಕಟ್ಟಲು ಬರುವಾಗ ರಾತ್ರಿ ವೇಳೆ ಒಬ್ಬರೇ ಬರಬಾರದು ಟಾರ್ಚ್ ಹಾಗೂ ದೊಣ್ಣೆ (ನಿಮ್ಮ ರಕ್ಷಣೆಗೆ) ತೆಗೆದುಕೊಂಡು ಬರಬೇಕು ಎಂದರು.


ಈ ಸಂದರ್ಭದಲ್ಲಿ ಮಂಡ್ಯ ಅರಣ್ಯವಲಯ ಅಧಿಕಾರಿ ಶೈಲಜಾ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದರು.

RELATED ARTICLES
- Advertisment -
Google search engine

Most Popular