Saturday, April 19, 2025
Google search engine

Homeರಾಜ್ಯ14 ಆನೆಗಳನ್ನ ದಸರಾಗೆ ಕರೆತರಲು ಚಿಂತನೆ : ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್..!

14 ಆನೆಗಳನ್ನ ದಸರಾಗೆ ಕರೆತರಲು ಚಿಂತನೆ : ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್..!

ಮೈಸೂರು: ಈ ಬಾರಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸರ್ಕಾರ ಸಿದ್ಧತೆ ಆರಂಭಿಸಿದ್ದು, 14 ಆನೆಗಳನ್ನ ದಸರಾಗೆ ಕರೆತರಲು ಚಿಂತನೆ ನಡೆಸಿದೆ.
ಈ ಮಧ್ಯೆ ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆನೆ ಕ್ಯಾಂಪ್ ನಲ್ಲಿ ಪ್ರಗ್ನೆನ್ಸಿ ಚೆಕ್ ಆದ ಬಳಿಕ ಹೆಣ್ಣಾನೆಗಳು ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಲಿವೆ.
ಕಳೆದ ಬಾರಿ ರಾಮಾಪುರ ಕ್ಯಾಂಪ್ ಆನೆ ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡಿತ್ತು. ಗರ್ಭಿಣಿ ಆನೆಯನ್ನ ತಾಲೀಮಿಗೆ ಬಳಸಿ ಮುಜುಗರಕ್ಕೆ ಇಲಾಖೆ ಒಳಗಾಗಿತ್ತು. ಇದೀಗ ಆನೆ ಆಯ್ಕೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತಿದ್ದು, ತಿಂಗಳಾಂತ್ಯಕ್ಕೆ ಆನೆಗಳ ಪಟ್ಟಿ ರೆಡಿಯಾಗಲಿದೆ. 14 ಆನೆಗಳನ್ನ ದಸರಾಗೆ ಕರೆತರಲು ಇಲಾಖೆ ಚಿಂತನೆ ನಡೆಸಿದೆ.

ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ. ಇನ್ನು ಅರ್ಜುನನಿಗೆ ವಯಸ್ಸಾದ ಕಾರಣ ಈ ಬಾರಿ ಈ ಎರಡು ಆನೆಗಳೂ ದಸರಾದಲ್ಲಿ ಕಾಣಿಸಿಕೊಳ್ಳುವುದಿಲ್ಲ.

RELATED ARTICLES
- Advertisment -
Google search engine

Most Popular