Saturday, April 19, 2025
Google search engine

Homeರಾಜ್ಯಪ್ರಸಕ್ತ ಮಳೆಗಾಲದಲ್ಲಿ ಇಂಧನ ಇಲಾಖೆಗೆ 15612.661 ಲಕ್ಷ ರೂ. ನಷ್ಠ : ಸಚಿವ ಕೆ. ಜೆ....

ಪ್ರಸಕ್ತ ಮಳೆಗಾಲದಲ್ಲಿ ಇಂಧನ ಇಲಾಖೆಗೆ 15612.661 ಲಕ್ಷ ರೂ. ನಷ್ಠ : ಸಚಿವ ಕೆ. ಜೆ. ಜಾರ್ಜ್

ಬೆಳಗಾವಿ : ರಾಜ್ಯದಲ್ಲಿ  ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆಯ ಪರಿಣಾಮ, ವಿದ್ಯುತ್ ಕಂಬಗಳು, ಪರಿವರ್ತಕಗಳು ಮತ್ತು ವಿದ್ಯುತ್ ಮಾರ್ಗಗಳಿಗೆ ರೂ 15,612.661 ಲಕ್ಷ  ನಷ್ಠ ಉಂಟಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದರು.

ಅವರು ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 74,594 ವಿದ್ಯುತ್ ಕಂಬಗಳು, 5,109  ಪರಿವರ್ತಕಗಳು ಹಾಗೂ 1693.19 ಕಿ.ಮೀ  ವಿದ್ಯುತ್ ಮಾರ್ಗಗಳಿಗೆ ಹಾನಿ ಸಂಭವಿಸಿದೆ ಎಂದರು.

ರಾಜ್ಯಕ್ಕೆ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಉಂಟಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹಾನಿಯನ್ನು ತಗ್ಗಿಸಲು ಮುಂಗಾರು ಪೂರ್ವದಲ್ಲಿ ಪೂರ್ವ ಸಿದ್ಧತೆ/ಸನ್ನದ್ಧತೆ ಕ್ರಮಗಳನ್ನು ತಜ್ಞ ಪಾಲಿಸುವ ಸಲುವಾಗಿ, ಇಲಾಖೆ ವತಿಯಿಂದ ಪೂರ್ವಭಾವಿಯಾಗಿ ಮುಂಗಾರು ಪೂರ್ವ ನಿರ್ವಹಣೆ (Pre Monsoon Contingency Plan) ಜಾರಿಗೊಳಿಸುವಂತೆ ಸೂಚಿಸಿ ಸುತ್ತೋಲೆಯನ್ನು  ಹೊರಡಿಸಲಾಗಿದೆ ಎಂದರು.

RELATED ARTICLES
- Advertisment -
Google search engine

Most Popular