ಮಂಗಳೂರು (ದಕ್ಷಿಣ ಕನ್ನಡ): ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾಗಿ ಬಿ.ಪ್ರವೀಣ್ ಚಂದ್ರರಾವ್ ಇವರು ಆಯ್ಕೆಯಾಗಿದ್ದು ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಅಧಿಕಾರವನ್ನು ಸ್ವೀಕಾರ ಮಾಡಿದರು.
ಕರವೇ ಕನ್ನಡ ಸೇನೆಯ ಉಸ್ತುವಾರಿಯಾದ ಸಂತೋಷ್ ಇವರು ಇವರಿಗೆ ಶಾಲು ಹೊದಿಸಿ ಪ್ರಮಾಣ ಪತ್ರವನ್ನು ನೀಡಿ ಅಧಿಕಾರವನ್ನು ನೀಡಿದರು.
ಇದೇ ವೇಳೆ ಮಾತನಾಡಿದ ಪ್ರವೀಣ್ ಚಂದ್ರರಾವ್ ತನ್ನ ಜೀವನದಲ್ಲಿ ಭ್ರಷ್ಟಾಚಾರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದೀನಿ. ಅಲ್ಲದೆ ಸುಳ್ಳು ಆರೋಪದಲ್ಲಿ 50 ದಿವಸ ಜೈಲಲ್ಲಿದ್ದೆ. ಏಕಾಂಗಿಯಾಗಿ ಹೋರಾಡಿ ಕೋರ್ಟಿನ ಮೂಲಕ ಜಯವನ್ನು ಪಡೆದಿದ್ದೇನೆ ಅಂತ ಹೇಳಿದರು.