ಮಂಗಳೂರು (ದಕ್ಷಿಣ ಕನ್ನಡ): 2017ರಿಂದ ಕ್ವಾರಿ ಮಾಲೀಕರ ಮೇಲೆ ದಂಡವನ್ನು ವಿಧಿಸಲಾಗಿದೆ. ಪ್ರಮಾಣೀಕರಣ ಸಾಮಗ್ರಿಯ ಮೇಲೆ ಅವೈಜ್ಞಾನಿಕವಾಗಿ ಯಾವುದೇ ಆಧಾರವಿಲ್ಲದೆ ದಂಡ ವಿಧಿಸುತ್ತಿದೆ. ಕ್ವಾರಿಗಳು ಬಹಳ ಸಮಯದಿಂದ ಕಾರ್ಯನಿರ್ವಹಿಸುತ್ತಿವೆ.
ವಾರ್ಷಿಕ ಆಧಾರದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಹೊರತೆಗೆಯಲಾದ ಖನಿಜಗಳ ಲೆಕ್ಕಪರಿಶೋಧನೆಯನ್ನು ಮಾಡುತ್ತಿದೆ. ಇದರ ಹೊರತಾಗಿಯೂ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕ್ವಾರಿ ಮಾಲೀಕರಿಗೆ ವಿಪರೀತ ದಂಡವನ್ನು ವಿಧಿಸಿದೆ ಎಂದು ಸ್ಟೋನ್ ಕ್ರಶರ್ ಆಂಡ್ ಕ್ವಾರಿ ಒನರ್ಸ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಶೆಟ್ಟಿ ಹೇಳಿದ್ದಾರೆ.
ಅವರು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿಂದು ಮಾತನಾಡಿದರು.