Saturday, April 19, 2025
Google search engine

Homeರಾಜ್ಯಮುಡಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ : ಬಿಜೆಪಿ ಮುಖಂಡನಿಂದಲೇ ಸ್ನೇಹಮಯಿ ಕೃಷ್ಣಗೆ ಕೋಟ್ಯಾಂತರ ರೂ. ಆಮಿಷ

ಮುಡಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ : ಬಿಜೆಪಿ ಮುಖಂಡನಿಂದಲೇ ಸ್ನೇಹಮಯಿ ಕೃಷ್ಣಗೆ ಕೋಟ್ಯಾಂತರ ರೂ. ಆಮಿಷ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಸ್ನೇಹಮಯಿ ಕೃಷ್ಣ ಅವರು ಹಲವು ಗಂಭೀರ ಆರೋಪ ಮಾಡಿದ್ದು ಅಲ್ಲದೆ, ಹೈಕೋರ್ಟ್ ನಲ್ಲಿ ಒಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯ ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ರಸ್ಟ್ ಸಿಕ್ಕಿದ್ದು ಬಿಜೆಪಿ ಮುಖಂಡನಿಂದಲೇ ನನಗೆ ಈ ಒಂದು ದೂರು ತೆಗೆದುಕೊಳ್ಳಲು ಆಮಿಷ ಒಡ್ಡಿದ್ದರು ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ.

ಮುಡಾ ಅಕ್ರಮ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಾಪಸ್ ಪಡೆಯುವಂತೆ ಪಾರ್ವತಿ ಅವರ ಆಪ್ತ ಎನ್ನಲಾದ ಹರ್ಷ ಪತ್ರಕರ್ತರೊಬ್ಬರ ಜೊತೆ ಬಂದು ಹಣದ ಆಮಿಷ ಒಡ್ಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ.

ಲೋಕಾಯುಕ್ತದಿಂದ ನಮಗೆ ಸಮಸ್ಯೆ ಇಲ್ಲ. ಕೇಸ್ ಸಿಬಿಐಗೆ ಹೋದರೆ ಸಮಸ್ಯೆಯಾಗುತ್ತದೆ. ಹಾಗಾಗಿ ನಿಮಗೆ ಎಷ್ಟು ಹಣ ಬೇಕು ಕೇಳಿ ನಾವು ಕೊಡುತ್ತೇವೆಂದು ಹರ್ಷ ಕಾಲು ಹಿಡಿದಿದ್ದಾರೆ. ಇದನ್ನ ನಾನು ನಿರಾಕರಿಸಿದೆ. ಅಲ್ಲದೆ, ನನ್ನ ಮಗನ ಬಳಿಗೆ ಹೋಗಿ ಮಾತನಾಡಿದ್ದು, ಈಗಾಗಲೇ ಇನ್ನೊಬ್ಬ ಹೋರಾಟಗಾರನಿಗೆ 3 ಕೋಟಿ ರೂಪಾಯಿಗಳ ವ್ಯವಹಾರ ಮುಗಿಸಿದ್ದು, ಒಂದೂವರೆ ಕೋಟಿ ಕೊಟ್ಟಿದ್ದೇವೆಂದು ಹಣದ ಬ್ಯಾಗ್ ಸಹ ತೋರಿಸಿದ್ದಾರೆ.

ಆದರೆ ನನ್ನ ಮಗ ಒಪ್ಪಿಲ್ಲ ಎಂದು ಸ್ನೇಹಮಯಿ ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತು ಸಿಸಿ ಕ್ಯಾಮೆರಾ ದೃಶ್ಯವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆಗೊಳಿಸಿದ್ದಾರೆ. ದೃಶ್ಯದಲ್ಲಿರುವ ಹರ್ಷ ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡ ಎನ್ನಲಾಗಿದೆ.ಅಲ್ಲದೆ ಆಮಿಷೆ ಒಡ್ಡಿರುವುದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹರ್ಷ ಹಾಗೂ ಜತೆಗೆ ಬಂದ ಖಾಸಗಿ ವಾಹಿನಿಯ ಪತ್ರಕರ್ತ ಶ್ರೀನಿಧಿ ಎನ್ನುವವರ ವಿರುದ್ಧ ಸಿಸಿಟಿವಿ ದೃಶ್ಯ ಸಮೇತ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular