Saturday, April 19, 2025
Google search engine

Homeರಾಜ್ಯಸುದ್ದಿಜಾಲಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜಕೀಯ ಅವಧಿಯಲ್ಲಿ ನಿಭಾಯಿಸಿದ ರೀತಿ ಇಂದಿನ ರಾಜಕಾರಣಿಗಳಿಗೆ ಪಾಠವಾಗಬೇಕು: ಸಾ.ರಾ.ಮಹೇಶ್

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜಕೀಯ ಅವಧಿಯಲ್ಲಿ ನಿಭಾಯಿಸಿದ ರೀತಿ ಇಂದಿನ ರಾಜಕಾರಣಿಗಳಿಗೆ ಪಾಠವಾಗಬೇಕು: ಸಾ.ರಾ.ಮಹೇಶ್

ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ನುಡಿ ನಮನ ಕಾರ್ಯಕ್ರಮ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟೇ ಸಂಕಷ್ಠಗಳು ಎದುರಾದರು ಅವುಗಳನ್ನು ನಿಭಾಯಿಸಿ ನಡೆದುಕೊಂಡ ರೀತಿ ಇಂದಿನ ರಾಜಕಾರಣಿಗಳಿಗೆ ಪಾಠವಾಗಬೇಕು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ಕೃಷ್ಣ ಮಂದಿರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ರಾಜಕೀಯ ಜೀವನವನ್ನು ತೆರೆದ ಪುಸ್ತಕದಂತೆ ಬಿಟ್ಟು ಹೋಗಿರುವ ಅವರ ಸಾಧನೆ ಮತ್ತು ತಾಳ್ಮೆ ದೇಶದ ಇತರ ರಾಜಕಾರಣಿಗಳಿಗೆ ಮೂಲ ಮಂತ್ರವಾಗಬೇಕೆಂದರು.
ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಹಾಗೂ ಉತ್ತಮ ಸ್ಥಾನಕ್ಕೆ ಏರಬೇಕಾದರೆ ನಿಷ್ಕಲ್ಮಷ ಮನಸ್ಸು ಇದ್ದರೆ ಮಾತ್ರ ಎಂಬುದಕ್ಜೆ ಉತ್ತಮ ಉದಾಹರಣೆ ದಿ.ಎಸ್.ಎಂ.ಕೃಷ್ಣ ಅವರು ಎಂದು ತಿಳಿಸಿದರು.
ಎಸ್.ಎಂ.ಕೃಷ್ಣ ಅವರ ನಿಧನ ಭಾರತದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದ್ದು ಅಂತಹ ನಾಯಕರ ಸಂತತಿ ಭವಿಷ್ಯದಲ್ಲಿ ಹೆಚ್ಚಾಗಿ ಬೆಳೆಯಲಿ ಎಂದು ಹಾರಿಸಿದರು.

ಮಾಜಿ ಸಚಿವ ಎಚ್.ವಿಶ್ವನಾಥ್ ಮಾತನಾಡಿ ಪಾಂಚಜನ್ಯ ಯಾತ್ರೆಯ ಮೂಲಕ 25 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಆನಂತರ ಜನರು ನೀಡಿದ ಪರಮಾಧಿಕಾರವನ್ನು ಬಳಕೆ ಮಾಡಿಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ವ್ಯಕ್ತಿತ್ವ ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದರು.

ಮುಖ್ಯಮಂತ್ರಿಗಳಾಗಿದ್ದಾದ ಅಕ್ಷರ ಕಲಿಕೆ, ಹಸಿದ ಮಕ್ಕಳಿಗೆ ಅನ್ನ ನೀಡುವುದರ ಜತೆಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಎಸ್.ಎಂ.ಕೃಷ್ಣ ಅವರ ಸರ್ಕಾರದ ಯೋಜನೆಗಳು ಅನುಕರಣೀಯ ಎಂದರು.
ಯಶಸ್ವಿನಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ಜನರ ಪ್ರಾಣ ಉಳಿಸಿದ ಆ ಮಹಾನುಭಾವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಾನೆತ್ತರಕ್ಕೆ ಕೊಂಡೊಯ್ದು ಚುನಾಯಿತ ಜನ ಪ್ರತಿನಿಧಿಗಳು ಯಾವ ರೀತಿ ಕೆಲಸ ಮಾಡಬೇಕೆಂಬುದನ್ನು ತೋರಿಸಿದ ಚತುರಮತಿ ರಾಜಕೀಯ ನಾಯಕ ಎಂದು ಕೊಂಡಾಡಿದರು.

ಸ್ತ್ರೀ- ಶಕ್ತಿ ಯೋಜನೆಯ ಮೂಲಕ ಲಕ್ಷಾಂತರ ತಾಯಂದಿರು ಆರ್ಥಿಕವಾಗಿ ಸಬಲರಾಗಲು ಕಾರಣರಾಗುವುದರೊಂದಿಗೆ ಭ್ರಷ್ಠಾಚಾರ ರಹಿತ ಆಡಳಿತ ನೀಡಿ ಸಂಪುಟದ ಸದಸ್ಯರು ಮುಕ್ತವಾಗಿ ಕೆಲಸ ಮಾಡಲು ಸದಾವಕಾಶ ನೀಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಜೆ ಸೇರ್ಪಡೆಯಾಗಲು ಎಸ್.ಎಂ.ಕೃಷ್ಣ ಅವರು ಪ್ರಮುಖ ಕಾರಣರಾಗಿದ್ದು ಇಷ್ಠೆ ಅಲ್ಲದೆ ತಮ್ಮ ರಾಜಕೀಯ ಜೀವನದ ಅವಧಿಯಲ್ಲಿ ಸಾವಿರಾರು ಮಂದಿ ಜನ ನಾಯಕರನ್ನು ಬೆಳೆಸಿದ ಅವರು ತಮ್ನ ಸುದೀರ್ಘ ಜೀವನದ ಅವಧಿಯಲ್ಲಿ ಯಾರ ವಿರುದ್ದವೂ ಲಘುವಾಗಿ ಮಾತನಾಡದೆ ಅಜಾತ ಶತ್ರುವಾಗಿದ್ದರೆಂದು ಹೆಮ್ಮೆಯಿಂದ ನುಡಿದರು.

ಜನ ತಂತ್ರ ವ್ಯವಸ್ಥೆಯಲ್ಲಿ ನಮ್ಮ ನಡವಳಿಕೆ ಸರಿಯಿದ್ದರೆ ಮಾತ್ರ ಶಾಸಕರಾಗಿ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂಬುದನ್ನು ಅರಿತಿದ್ದ ಮಾಜಿ ಮುಖ್ಯಮಂತ್ರಿಗಳು ಅದನ್ನು ಪಾಲಿಸಿ ಇತರರಿಗೂ ಕಲಿಸಿ ಬಹು ದೊಡ್ಡ ಪಕ್ಷಾತೀತ ಹಾಗೂ ಜಾತ್ಯಾತೀತ ರಾಜಕೀಯ ಪರಂಪರೆ ಬಿಟ್ಟು ಹೋಗಿರುವ ಸಾಧಕರೆಂದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ.ಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಪುರಸಭೆ ಸದಸ್ಯ ಕೆ.ಪಿ‌ಪ್ರಭುಶಂಕರ್, ಮುಖಂಡ ಎಸ್.ಪಿ.ಆನಂದ್, ಸಾಹಿತಿ ಹೆಗ್ಗಂದೂರುಪ್ರಭಾಕರ್ ಮತ್ತಿತರರು ಮಾತನಾಡಿ ನುಡಿ ನಮನ ಸಲ್ಲಿಸಿದರು.

ಪುರಸಭೆ ಸದಸ್ಯ ಉಮೇಶ್, ಮಾಜಿ ಸದಸ್ಯರಾದ ರಾಜ.ಶ್ರೀಕಾಂತ್, ಎನ್.ಶಿವಕುಮಾರ್, ಹೆಚ್.ಸಿ.ರಾಜು, ಕೆ.ಬಿ.ಸುಬ್ರಹ್ಮಣ್ಯ, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮೆಡಿಕಲ್ ರಾಜಣ್ಣ, ಶ್ರೀರಂಗಪಟ್ಟಣ ಸಂಜಯ್ , ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅದ್ಯಕ್ಷೆ ದಾಕ್ಷಾಯಿಣಿ, ತಾ.ಪಂ.ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾದ ಅರ್ಜುನಹಳ್ಳಿಗಣೇಶ್, ಎಂ.ಎಸ್.ಹರಿಚಿದಂಬರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಯು.ಕೃಷ್ಣಭಟ್, ಹಿರಿಯ ವೈಧ್ಯ ಡಾ.ಎನ್.ಡಿ.ಜಗನ್ನಾಥ್, ಹೆಚ್.ಪಿ.ಗೋಪಾಲ್, ಹೆಚ್.ಪಿ.ಶಿವಣ್ಣ, ವೀರಭದ್ರಾಚಾರ್, ಬಿ.ರಮೇಶ್, ರಾಂಪ್ರಸಾದ್, ಡಿ.ವಿ.ಗುಡಿಯೋಗೇಶ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular