ಸರಗೂರು: ಮೈಸೂರು ಗ್ರಾಮಾಂತರ ಜಿಲ್ಲೆ ಸರಗೂರು ತಾಲೂಕಿನ ನೆಮ್ಮನಹಳ್ಳಿ ಹಾಡಿಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಎಸ್.ಎಸ್. ಫೌಂಡೇಶನ್ ಇವರ ಸಹಯೋಗದೊಂದಿಗೆ ಪಾರಂಪರಿಕ ಆದಿವಾಸಿಗಳ ಬೆಟ್ಟದ ಕುರುಬರ ಚಾವಡಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಶ್ರೀ. ಶ್ರೀ. ಶಿವಾಚಾರ್ಯ ಗಂಗಾಧರ ಸ್ವಾಮೀಜಿಗಳು ತಂಡೆಗೆರೆ ಮಠ ಹಾಗೂ ಓಂ ಶ್ರೀ ಗಾಡಿಗಾರಯ್ಯ ಕಣಗಲೆ ಅಮ್ಮ ಕಣಗಲೆ ಅಯ್ಯ ಏಳು ಕುತ್ತಿ ದೊಡ್ಡವರ ಆದಿವಾಸಿಗಳ ಮಠ ಶ್ರೀ ಹರೀಶ್ ಗೋಪಾಲ್ ಪೂಜಾರ್ರು ಈ ಎರಡು ಮಠದ ಸ್ವಾಮೀಜಿಗಳು ಮನೆಮನೆಗಳಿಗೆ ಪಾದಯಾತ್ರೆ ಮಾಡಿ ಜನರಿಗೆ ಆಶೀರ್ವದಿಸಿದರು.

ನಂತರ ಕೆಆರ್ ಪೇಟೆ ತಾಲೂಕಿನ ಅರ್ಚಕರು ಗೋಪಾಲ್ ಸ್ವಾಮೀಜಿ ರವರು ಚೌಡಿಯಲ್ಲಿ ಹೋಮವನ್ನು ನೆರವೇರಿಸಿದರು.

ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ಸೂರ್ಯನಾರಾಯಣಜಿ ರವರು ದೇವಸ್ಥಾನದ ಹಾಗೂ ಹಿಂದೂ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಹಾಡಿ ಯಜಮಾನರು, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು , ಎಸ್.ಎಸ್ ಫೌಂಡೇಶನ್ ಕಾರ್ಯಕರ್ತರು ಗಿರಿಜನರ ಸುರಕ್ಷಾ ವೇದಿಕೆ, ಹಾಗೂ ಹಾಡಿ ಎಲ್ಲಾ ಬೆಟ್ಟದ ಕುರುಬ ಮುಖಂಡರು ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.