ಮದ್ದೂರು: ವಿಷಪೂರಿತ ಸೊಪ್ಪು ಸೇವನೆಯಿಂದ ೧೧ ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರೈತ ಎಲ್.ಮಹೇಶ್ ಎಂಬುವರಿಗೆ ಸೇರಿದ್ದ ಕುರಿಗಳಾಗಿವೆ. ಅವರು ಎಂದಿನಂತೆ ತಮ್ಮ ೫೦ ಕುರಿಗಳ ಮಂದೆಯನ್ನು
ಗ್ರಾಮದ ಹೊರವಲಯದಲ್ಲಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಗಿಡ, ಬಳ್ಳಿ ತಿನ್ನುತ್ತಿದ್ದ ವೇಳೆ ವಿಷಾಹಾರ ಸೇವಿಸಿವೆ
ಎನ್ನಲಾಗಿದೆ. ಮನೆಗೆ ಕುರಿಗಳು ಮರಳಿ ಬಂದಾಗ ಸಂಜೆ ಮೃತಪಟ್ಟಿವೆ. ಮಹೇಶ್ ಅವರು ತಕ್ಷಣ ಪಶು ಇಲಾಖೆಗೆ ದೂರವಾಣಿ ಕರೆ
ಮಾಡಿದಾಗ ಪಶುವೈದ್ಯೆ ಜ್ಯೋತಿ ಹಾಗೂ ಸಿಬ್ಬಂದಿ ಆಗಮಿಸಿ ಕುರಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಉಳಿದ
ಕುರಿಗಳು ಪಾಣಪಾಯದಿಂದ ಪಾರಾಗಿವೆ.
ಕುರಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಮಹೇಶ್ ಅವರು, ೧೧ ಕುರಿಗಳು ಮೃತಪಟ್ಟಿರುವುದರಿಂದ
ಆರ್ಥಿಕವಾಗಿ ನಷ್ಟ ಸಂಭವಿಸಿದೆ. ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ಕುರಿಗಾಹಿ ರೈತನಿಗೆ ಸೂಕ್ತ ಪರಿಹಾರ
ನೀಡಬೇಕೆಂದು ಗ್ರಾಮದ ಮುಖಂಡ ಕುಂದನಕುಪ್ಪೆ ಕುಮಾರ್ ಒತ್ತಾಯಿಸಿದ್ದಾರೆ.