Saturday, April 19, 2025
Google search engine

Homeಅಪರಾಧಕಾನೂನುಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್‌ ಪ್ರತಾಪ್‌ಗೆ ಜಾಮೀನು ಮಂಜೂರು

ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ಪ್ರಕರಣ: ಡ್ರೋನ್‌ ಪ್ರತಾಪ್‌ಗೆ ಜಾಮೀನು ಮಂಜೂರು

ಮಧುಗಿರಿ: ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ಮಾಡಿದ್ದ ಡ್ರೋನ್‌ ಪ್ರತಾಪ್‌ಗೆ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ತಾಲ್ಲೂಕಿನ ಜನಕಲೋಟಿ ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಈ ಒಂದು ಸ್ಪೋಟ ಪ್ರಯೋಗ ಮಾಡಿದ್ದರು. ತಾಲ್ಲೂಕಿನ ಜನಕಲೋಟಿ ಗ್ರಾಮದ ರಾಯರ ಬೃಂದಾವನ ಫಾರ್ಮ್‌ ನ ಕೃಷಿ ಹೊಂಡದಲ್ಲಿ ಸ್ಪೋಟ ನಡೆಸಿದ್ದರು. ಸ್ಫೋಟದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ರೋನ್‌ ಪ್ರತಾಪ್‌ ಅಪ್ಲೋಡ್ ಮಾಡಿದ್ದರು.

ಸ್ಪೋಟದ ವಿಡಿಯೋವನ್ನು ಆಧರಿಸಿ ಮಿಡಿಗೇಶಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಬಳಿಕ ಡ್ರೋನ್‌ ಪ್ರತಾಪ್‌ ಅವರನ್ನು ಬಂಧಿಸಿದ್ದರು. ನ್ಯಾಯಾಲಯವು ಡಿ.16ರಂದು 10 ದಿನಗಳವರೆಗೂ ಡ್ರೋನ್‌ ಪ್ರತಾಪ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಡ್ರೋನ್‌ ಪ್ರತಾಪ್‌ ಬಿಡುಗಡೆಯಾದರು.

RELATED ARTICLES
- Advertisment -
Google search engine

Most Popular