ವರದಿ ಎಡತೊರೆ ಮಹೇಶ್
ಎಚ್ ಡಿ ಕೋಟೆ: ಇಂದು ಬುದ್ಧ ಚಾರಿಟಬಲ್ ಟ್ರಸ್ಟ್ , ಆರೋಗ್ಯ ಇಲಾಖೆ, ರೋಟರಿ ಸಂಸ್ಥೆ ಹೆಚ್ .ಡಿ. ಕೋಟೆ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಹೈರಿಗೆ ಗ್ರಾಮದಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರ ವನ್ನು ಅಯೋಜನೆ ಮಾಡಲಾಗಿತ್ತು. ಅಧ್ಯಕ್ಷತೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್ ಟಿ ರವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಲಿಂಗರಾಜು ರವರು ಮಾತನಾಡಿ ಬುದ್ಧ ಚಾರಿಟಬಲ್ ಟ್ರಸ್ಟ್ ಬೆಳದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ಈ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಬಡಜನರಿಗೆ ಸಹಕಾರಿ ಆಗಿದ್ದು ಆರೋಗ್ಯಾ ಕ್ಷೇತ್ರದಲ್ಲಿಯು ಕಾರ್ಯಕ್ರಮ ರೂಪಿಸುತ್ತಿದ್ದು ಇದಕ್ಕೆ ತಾಲ್ಲೂಕು ಆಡಳಿತವತಿಯಿಂದ ಸಂಪೂರ್ಣವಾಗಿ ಸಹಕರ ನೀಡಲಾಗುವುದು ಎಂದು ತಿಳಿಸಿದರು,
ಈ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು . ಇದೆ ಸಂದರ್ಭದಲ್ಲಿ ಹೈರಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಜಯನಾಗರಾಜು , ಉಪಾಧ್ಯಕರು, ಎಸ್ ಡಿ ಎಂ ಅಧ್ಯಕ್ಷರು ,ಸಂಸ್ಥೆಯ ಕಾರ್ಯ ದರ್ಷಿಗಳಾದ ಮಂಜುನಾಥ್ , ಮುಖಂಡರಾದ ಮಾರಿದೇವಯ್ಯ, ಮುದ್ದು ಮಲ್ಲಯ್ಯ, ದಿನೇಶ್ , ಶಿವಣ್ಣ ,ಶಿವರಾಜು, ದೇವರಾಜು ,ಮಲ್ಲೇಶ್, ಎಲ್ಲಾ ಗ್ರಾಮ ಪಂಚಾಯ್ತಿಯ ಸದಸ್ಯರು, ಮಾಜಿ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.