ತಿ.ನರಸೀಪುರ: ತಾಲ್ಲೂಕಿನ ಮೂಗೂರು ಹೋಬಳಿ ಹ್ಯಾಕನೂರು ಗ್ರಾಮದಲ್ಲಿ ಗುರುವಾರ ೩ರಿಂದ ೪ ವರ್ಷ ವಯಸ್ಸಿನ ಹೆಣ್ಣು ಚಿರತೆಯು ಬೋನಿಗೆ ಬಿದ್ದಿದೆ.
ಗ್ರಾಮದ ಬಳಿ ಕಳೆದ ಇಪ್ಪತ್ತು ದಿನಗಳಿಂದ ಚಿರತೆ ಹಾವಳಿ ಇದ್ದು, ಹಲವು ಜಾನುವಾರುಗಳನ್ನು ಕೊಂದಿತ್ತು. ಜಮೀನುಗಳಲ್ಲಿ ರೈತರು ಕೆಲಸ ಮಾಡುವ ವೇಳೆ ಜನರ ಕಣ್ಣಿಗೂ ಚಿರತೆ ಕಾಣಿಸಿಕೊಂಡಿದ್ದು, ದೂರು ದಾಖಲಾದ ಮೇರೆಗೆ ಹ್ಯಾಕನೂರು ಗ್ರಾಮದ ಖಾಸಗಿ ಜಮೀನಿನಲ್ಲಿ ಡಿ.೨೦ರಂದು ಕ್ಯಾಟಲ್ ಪೆನ್ ಬೋನ್ ಇರಿಸಲಾಗಿತ್ತು.
`ಚಿರತೆಯನ್ನು ಪಶು ವೈದ್ಯಾಧಿಕಾರಿಗಳು ಪರಿಶೀಲಿಸಿದ್ದು, ಆರೋಗ್ಯಕರವಾಗಿದ್ದು, ಮೈಕ್ರೋಚಿಪ್ ಅಳವಡಿಸಲಾಗಿದೆ. ಸೂಕ್ತ ವನ್ಯಜೀವಿ ಧಾಮ ಅರಣ್ಯ ಪ್ರದೇಶಕ್ಕೆ ಮೇಲಧಿಕಾರಿಗಳ ಆದೇಶದ ಮೇರೆಗೆ ಬಿಡುಗಡೆಗೊಳಿಸಲಾಗುವುದು’ ಎಂದು ಮೈಸೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.