ಹೃದಯಾಘಾತಕ್ಕೆ ಕಾರಣ ಮತ್ತು ನಿಯಂತ್ರಣದ ಕುರಿತ ವಿಚಾರ ಸಂಕಿರ್ಣ ಕಾರ್ಯಕ್ರಮ ಉದ್ಘಾಟನೆ
ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯ ಸರ್ಕಾರವು ಗೃಹ ಆರೋಗ್ಯ ಯೋಜನೆಯಡಿ ಬಿ.ಪಿ.ಮತ್ತು ಮಧುಮೇಹ ರೋಗಿಗಳಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸುವ ಕಾರ್ಯ ಜನವರಿ ತಿಂಗಳಿಂದ ಕೆ.ಆರ್.ನಗರ ಕ್ಷೇತ್ರದಲ್ಲಿ ಆರಂಭಿಸಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಟರಾಜು ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸಿ.ಎಚ್.ದೇವೇಗೌಡ ಸ್ಮಾರಕ ಉಚಿತ ವಾಚನಾಲಯದ ವತಿಯಿಂದ ಏರ್ಪಡಿಸಿದ್ದ ಹೃದಯಾಘಾತಕ್ಕೆ ಕಾರಣ ಮತ್ತು ನಿಯಂತ್ರಣದ ಕುರಿತ ವಿಚಾರ ಸಂಕಿರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಈ ಕಾರ್ಯಕ್ರಮದಿಂದ ಬಡಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಸಕ್ಕರೆ ಮತ್ತು ಕೊಬ್ಬಿನ ಆಹಾರಗಳ ಅತಿಯಾದ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಜಡ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಮತ್ತು ಮದ್ಯಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣವಾಗಲಿದ್ದು ವೈದ್ಯರು ನೀಡುವ ಮಾರ್ಗ ಸೂಚನೆಯಂತೆ ಹೃದಯಾಘಾತದ ಮುನ್ಸೂಚನೆ ಕಂಡು ಬಂದಾಗ ನಿರ್ಲಕ್ಷ್ಯ ವಹಿಸದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳ ಬೇಕು ಇದರಿಂದ ಹೃದಯಾಘಾತದಿಂದ ಪಾರಾಗ ಬಹುದು ಎಂದರು.
ಹೃದಯಾಘಾತವನ್ನು ತಪ್ಪಿಸಲು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಧೂಮಪಾನ ಮತ್ತು ಅತಿಯಾದ ಮದ್ಯಪಾನವನ್ನು ತಪ್ಪಿಸುವುದು, ಜೀವನದ ಜಂಜಾಟದ ಒತ್ತಡವನ್ನು ಕಡಿಮೆ ಮಾಡುವುದರ ಜತಗೆ ಕಾಲಕಾಲಕ್ಕೆ ನಿಯಮಿತ ತಪಾಸಣೆಗಳನ್ನು ಮಾಡಿ ಕೊಳ್ಳುವುದರೊಂದಿಗೆ ಬಿ.ಪಿ.ಮತ್ತು ಸಕ್ಕರೆ ಖಾಯಿಲೆಯು ಅನುವಂಶಿಯವಾಗಿ ಬರುತ್ತಿರುವುದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದರು.
ಇದೇ ಸಂದರ್ಭದಲ್ಲಿ ಸಿ.ಎಚ್.ದೇವೇಗೌಡ ಸ್ಮಾರಕ ಉಚಿತ ವಾಚನಾಲಯದ ವತಿಯಿಂದ ಹೊರ ತಂದಿರುವ 2025ರ ಕ್ಯಾಲೆಂಡರ್ ಅನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಬಿಡುಗಡೆ ಮಾಡಿದರು.

ಕಾರ್ಯಕ್ರಮಕ್ಕು ಮೊದಲು ನಿಧನರಾದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ , ಚಿಮುಕು ಬಳಗದ ಉಪಾಧ್ಯಕ್ಷ ಬಾಲಕಿಟ್ಟಿ, ಮರಿಲಿಂಗಮ್ಮನ ಸ್ವಾಮಿಗೌಡ, ಜವರಮ್ಮಅವರಿಗೆ ಸಂತಾಪ ಸೂಚಿಸಲಾಯಿತು
ಇದೇ ಸಂದರ್ಭದಲ್ಲಿ ಚಿಮುಕು ಭೂಮಿ ಬಳಗದ ವತಿಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ನಟರಾಜು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಸವಿತಾ ಶ್ರೀನಿವಾಸ್, ಕುಪ್ಪೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ.ಪಾರ್ಥ , ಚಿಮುಕು ಭೂಮಿ ಬಳಗದ ಅಧ್ಯಕ್ಷ ಮುದ್ದನಹಳ್ಳಿ ಸೋಮಪ್ಪ, ನಿವೃತ್ತ ಶಿಕ್ಷಕ ಸಿ.ಎಲ್.ಕಾಳೇಗೌಡ, ನಾಟಿ ವೈದ್ಯ ನಾಗರಾಜು, ಬಸವಣ್ಣ, ಸಣ್ಣಮೊಗೇಗೌಡ, ಸಿ. ಕೆ. ರಾಮಸ್ವಾಮಿ , ತುಂಗದ ಸ್ವಾಮಿ, ಸಿ. ಕೆ. ಕೆಂಪೇಗೌಡ, ಕೆ.ಎಸ್. ಸದಾಶಿವಕೀರ್ತಿ,ಮುದ್ದನಹಳ್ಳಿ ಗಂಗಾಧರ, ವಡ್ಡರಕೊಪ್ಪಲು ಕುಮಾರಸ್ವಾಮಿ, ಮುದ್ದನಹಳ್ಳಿ ವಸಂತ್, ಬಸವರಾಜು, ಪ್ರಸನ್ನಕುಮಾರ್, ಶಿಕ್ಷಕಿ ಸವಿತಾ, ಆಶಾಕಾರ್ಯಕರ್ತೆ ಸುಜಾತಮ್ಮ, ಸೇರಿದಂತೆ ಮತ್ತಿತರರು ಹಾಜರಿದ್ದರು.