Saturday, April 19, 2025
Google search engine

Homeರಾಜ್ಯಸುದ್ದಿಜಾಲಡಿ.30 ರಿಂದ ಜ.5 ರ ವರೆಗೆ ಶಾಂತಿ ಸೌಹಾರ್ದ ಮತ್ತು ಸದ್ಬಾವನಾ ಪಾದಯಾತ್ರೆ: ನಟರಾಜಸ್ವಾಮಿ ಮಾಹಿತಿ

ಡಿ.30 ರಿಂದ ಜ.5 ರ ವರೆಗೆ ಶಾಂತಿ ಸೌಹಾರ್ದ ಮತ್ತು ಸದ್ಬಾವನಾ ಪಾದಯಾತ್ರೆ: ನಟರಾಜಸ್ವಾಮಿ ಮಾಹಿತಿ

  • ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಹುಣಸೂರು ತಾಲೂಕಿನ ಗಾವಡಗೆರೆ ಗುರುಲಿಂಗ ಜಂಗಮ ಮಠದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳ ಜತೆಗೂಡಿ ಡಿ. 30 ರಿಂದ ಜ 5 ರ ವರೆಗೆ 9 ನೇ ವರ್ಷದ ಶಾಂತಿ ಸೌಹಾರ್ದ ಮತ್ತು ಸದ್ಬಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀಗಳಾದ ನಟರಾಜಸ್ವಾಮಿಗಳು ಹೇಳಿದರು.

ಪಟ್ಟಣದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಗತ್ತಿನ ಜೀವ ಸಂಕುಲಗಳಿಗೆ ಒಳಿತನ್ನು ಬಯಸಿ ಪಾದಯಾತ್ರೆ ನಡೆಸುತ್ತಿದ್ದು ಈ ಸಂಧರ್ಭದಲ್ಲಿ ಸ್ವಚ್ಚತೆಯ ಬಗ್ಗೆ ತಿಳಿಸಿ ಇದರ ಜತೆಗೆ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಾಗುತ್ತದೆ ಎಂದರು.

ಡಿ.30 ರಂದು ಸೋಮವಾರ ಗಾವಡಗೆರೆ ಮಠದಲ್ಲಿ ಪೂಜಾ ಕೈಂಕರ್ಯಗಳನ್ನು ಮುಗಿಸಿ ಹೊರಡುವ ಮಲೆ ಮಹದೇಶ್ವರ ಬೆಟ್ಟದ ಸದ್ಬಾವನಾ ಪಾದಯಾತ್ರೆ ಮಧ್ಯಾಹ್ನ ಕೆ.ಆರ್.ನಗರ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆನಂತರ ರಾತ್ರಿ ಲಾಳಂದೇವನಹಳ್ಳಿಯಲ್ಲಿ ತಂಗಲಿದೆ ಎಂದು ಮಾಹಿತಿ ನೀಡಿದರು.

ಜ.31 ರಂದು ಮಂಗಳವಾರ ಬೆಳಿಗ್ಗೆ ಲಾಳಂದೇವನಹಳ್ಳಿ ಗ್ರಾಮದಿಂದ ಹೊರಡಲಿರುವ ಯಾತ್ರೆ ಸಂಜೆ ಮೈಸೂರಿನ ಕನಕ ಭವನದಲ್ಲಿ ತಂಗಲಿದ್ದು ಜ.1 ರಂದು ಬುಧವಾರ ಬೆಳಿಗ್ಗೆ ಮೈಸೂರಿನಿಂದ ಹೊರಟು ಸಂಜೆ ಟಿ.ನರಸೀಪುರ ತಲುಪಲಿದ್ದು ರಾತ್ರಿ ಅಲ್ಲಿನ ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿದೆ ಎಂದು ಪ್ರಕಟಿಸಿದರು.

ಜ.2 ರಂದು ಗುರುವಾರ ಟಿ.ನರಸೀಪುರದಿಂದ ಹೊರಡಲಿರುವ ಶಾಂತಿ ಸೌಹಾರ್ದ ಮತ್ತು ಸದ್ಬಾವನಾ ಪಾದಯಾತ್ರೆ ಅಂದು ರಾತ್ರಿ ಕೊಳ್ಳೇಗಾಲ ಪಟ್ಟಣದ ಜೆಎಸ್ಎಸ್ ವಿದ್ಯಾರ್ಥಿ ನಿಲಯದಲ್ಲಿ ಇರಲಿದ್ದು ಜ.3 ರಂದು ಶುಕ್ರವಾರ ಬೆಳಿಗ್ಗೆ ಕೊಳ್ಳೇಗಾಲದಿಂದ ಹೊರಟು ರಾತ್ರಿ ಹನೂರಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡಲಿದೆ ಎಂದು ನುಡಿದರು.

ಜ. 4 ರಂದು ಶನಿವಾರ ಬೆಳಿಗ್ಗೆ ಹನೂರಿನಿಂದ ಹೊರಡಲಿರುವ ಯಾತ್ರೆಯು ರಾತ್ರಿ ತಾಳಬೆಟ್ಟದಲ್ಲಿ ತಂಗಲಿದ್ದು ಜ. 5 ರಂದು ಭಾನುವಾರ ಬೆಳಿಗ್ಗೆ ತಾಳಬೆಟ್ಟದಿಂದ ನಿರ್ಗಮಿಸಿ 77 ಮಲೆಗಳನ್ನು ದಾಟಿ ಮಹದೇಶ್ವರ ಬೆಟ್ಟ ತಲುಪಿ ಮಹಾ ದ್ವಾರದ ಮೂಲಕ ಸ್ವಾಮಿಯವರ ದರ್ಶನ ಪಡೆಯಲಾಗುತ್ತದೆಂದು ಶ್ರೀಗಳು ಪಾದಯಾತ್ರೆಯ ವಿವರ ನೀಡಿದರು.

ಪಾದಯಾತ್ರೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆ ಹಾಗೂ ಮಠದ ಭಕ್ತಾದಿಗಳು ಬಾಗವಹಿಸಲಿದ್ದು ಆಸಕ್ತರು ನಮ್ಮೊಂದಿಗೆ ಪಾಲ್ಗೊಂಡರೆ ಅವರಿಗೆ ಮಠದ ವತಿಯಿಂದ ಪ್ರಸಾದ ಮತ್ತು ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಸಮಾಜ ಸೇವಕ ಚಿಕ್ಕವಡ್ಡರಗುಡಿಉಮಾಶಂಕರ್, ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಚಂದ್ರಶೇಖರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಪ್ರಭು, ತಾಲೂಕು ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಗಂಗಾಧರ್, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ವೀರಶೈವ ಮುಖಂಡರಾದ ಲಾಳನಹಳ್ಳಿ ಮಹೇಶ್, ಭೇರ್ಯಪ್ರಕಾಶ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular