ವರದಿ : ವಿನಯ್ ದೊಡ್ಡಕೊಪ್ಪಲು ಕೆ.ಆರ್.ನಗರ : ಮಧ್ಯಪಾನದಿಂದ ಸಮಾಜದಲ್ಲಿ ವ್ಯಕ್ತಿತ್ವ ನಾಶವಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗ ಬೇಕಾಗುತ್ತದೆ ಎಂದು ಮೈಸೂರು ಯುವರಾಜ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ಸಿ. ಡಿ. ಪರಶುರಾಮ ಹೇಳಿದರು.
ಸಾಲಿಗ್ರಾಮ ಪಟ್ಟಣದ ಬಾಹುಬಲಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಸಾಲಿಗ್ರಾಮ ತಾಲೂಕು ಮದ್ಯವರ್ಜನ ಶಿ ಸೇಬಿರದ ವ್ಯವಸ್ಥಾಪನಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 1903 ನೇ ಮದ್ಯವರ್ಜನ ಶಿಬಿರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿರು ಯುವ ಜನತೆ ಸಮಾಜಕ್ಕೆ ಮಾದರಿಯಾಗದೇ ಇಂದು ಮಧ್ಯ ಸೇವನೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿ ಕೊಳ್ಳುತ್ತಿರುವುದರ ಜೊತೆ ತಮ್ಮನ್ನು ನಂಬಿದ ಕುಟುಂಬದ ಗೌರವಕ್ಕೆ ಕಳಂಕ ತರುವುದರ ಜತಗೆ ದೈಹಿಕವಾಗಿ ಕಿನ್ನತೆ ಒಳಗಾಗುತ್ತಿರುವುದು ಸಮಾಜಕ್ಕೆ ಮಾರಕವಾಗುತ್ತಿದೆ ಎಂದರು.
ಮಧ್ಯದ ಜೊತೆಗೆ ತಂಬಾಕು ಸೇವನೆ, ಮಾದಕ ವಸ್ತುಗಳ ಸೇವನೆಯಿಂದಲು ಸಹ ಜನತೆ ಹತ್ತಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದು ಇದನ್ನು ತಡೆಯಲು ಈ ಸಂಸ್ಥೆ ವಿವಿಧ ಕಾರ್ಯಕ್ರಮಗಳ ಮೂಲಕ ಮಧ್ಯಪಾನ ಮಾಡುವರನ್ನು ಮಧ್ಯದಿಂದ ಮತ್ತು ದುಷ್ಟಚಟಗಳನ್ನು ದೂರವಿಡಲು ಶ್ರಮಿಸುತ್ತಿದ್ದು ಸಮಾಜಕ್ಕೆ ಮಾದರಿ ಕೆಲಸ ಎಂದರು. ಮದ್ಯವ್ಯಸನಿಗಳೆಲ್ಲರೂ ಸಂಪೂರ್ಣವಾಗಿ ಮದ್ಯಪಾನ ತ್ಯಜಿಸಿ ಹೊಸ ಜೀವನ ಪ್ರಾರಂಭಿಸಿ ಹೊಸ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಪರಿವರ್ತನೆಯಾದ ಹಲವು ವ್ಯಕ್ತಿಗಳ ಯಶೋಗಾಥೆಯನ್ನು ತಿಳಿಸಿ ಈ ಶಿಬಿರದಲ್ಲಿ ಮಧ್ಯಪಾನ ದಿಂದ ದೂರವಾದವರು ಮತ್ತೆ ಮಧ್ಯ ಮುಟ್ಟದೇ ಹೋದರೇ ಧರ್ಮಸ್ಥಳ ಮಂಜುನಾಥನಿಗೆ ಕಾಣಿಕೆ ಕೊಟ್ಟಹಾಗೆ ಎಂದರು.
ಈ ಸಂದರ್ಭದಲ್ಲಿ ಯೋಜನಾ ಅಧಿಕಾರಿ ಉಮೇಶ್ ಪೂಜಾರಿ, ಶಿಬಿರದ ವಲಯ ಮೇಲ್ವಿಚಾರಕ ನಾಗರಾಜು, ಶಿಬಿರಾಧಿಕಾರಿಗಳಾದ ವಿದ್ಯಾಧರ, ರಮೇಶ್, ಮುಖಂಡರಾದ ಮುದ್ದನಹಳ್ಳಿ ಸೋಮಪ್ಪ, ಬಸವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು