Saturday, April 19, 2025
Google search engine

HomeUncategorizedರಾಷ್ಟ್ರೀಯಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

ಚೆನ್ನೈ: ಕನ್ಯಾಕುಮಾರಿ ಕರಾವಳಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ ಮತ್ತು 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ ಗಾಜಿನ ಸೇತುವೆಯನ್ನು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಉದ್ಘಾಟಿಸಿದ್ದಾರೆ.

ಈ ಗಾಜಿನ ಸೇತುವೆಯು ದೇಶದಲ್ಲೇ ಮೊದಲನೆಯದಾಗಿದೆ. ಪ್ರವಾಸಿಗರಿಗೆ ಇಬ್ಬರು ಮಹಾನ್‌ ವ್ಯಕ್ತಿಗಳ ಸ್ಮಾರಕಗಳು ಮತ್ತು ಸುತ್ತಲೂ ಸಮುದ್ರದ ವೀಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೇ ಈ ಸೇತುವೆ ಸಮುದ್ರದ ಮೇಲೆ ನಡೆಯುವ ರೋಮಾಂಚಕ ಅನುಭವವನ್ನು ನೀಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರವು 37 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಿದೆ. ಬೌಸ್ಟ್ರಿಂಗ್ ಕಮಾನನ್ನು ಗಾಜಿನ ಸೇತುವೆಗೆ ಲವಣಯುಕ್ತ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸೇತುವೆ 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವಿದೆ.

ಉದ್ಘಾಟನೆಯ ನಂತರ ಎಂ.ಕೆ ಸ್ಟಾಲಿನ್ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಸಂಸದೆ ಕನಿಮೋಳಿ ಮತ್ತು ಹಿರಿಯ ಅಧಿಕಾರಿಗಳು ಸೇತುವೆಯ ಮೇಲೆ ಓಡಾಡಿ ಸಂಭ್ರಮಿಸಿದ್ದಾರೆ. ಬಳಿಕ ತಿರುವಳ್ಳುವರ್ ಪ್ರತಿಮೆ ಬಳಿ ಲೇಸರ್ ಲೈಟ್ ಶೋ ನಡೆಯಿತು.

RELATED ARTICLES
- Advertisment -
Google search engine

Most Popular