Monday, April 21, 2025
Google search engine

Homeರಾಜ್ಯಮದ್ಯಪ್ರಿಯರಿಗೆ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ : 3 ಬಾಟಲ್ ಮದ್ಯ ಖರೀದಿಸಿದ್ರೆ 1...

ಮದ್ಯಪ್ರಿಯರಿಗೆ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್ : 3 ಬಾಟಲ್ ಮದ್ಯ ಖರೀದಿಸಿದ್ರೆ 1 ಬಾಟಲ್ ಫ್ರೀ

ಬೆಂಗಳೂರು : ಹೊಸ ವರ್ಷಕ್ಕೆ ಮದ್ಯ ಪ್ರಿಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಮೂರು ಬಾಟಲ್ ಮದ್ಯ ಖರೀದಿಸಿದರೆ ಒಂದು ಉಚಿತವಾಗಿ ನೀಡುವ ಘೋಷಣೆ ಮಾಡಲಾಗಿದೆ.

ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಪಬ್, ವೈನ್ ಸ್ಟೋರ್ ಗಳಲ್ಲಿ ಮದ್ಯಪ್ರಿಯರಿಗೆ ಆಫರ್ ನೀಡುತ್ತಿದ್ದಾರೆ. ಡಿಸೆಂಬರ್ 31 ರಂದು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತದೆ. ಹೀಗಾಗಿ ವ್ಯಾಪಾರ, ಗ್ರಾಹಕರ ಹೆಚ್ಚಳದ ಜೊತೆಗೆ ಗ್ರಾಹಕರನ್ನು ಸಂಪಾದಿಸಲು ದುಬಾರಿ ಬೆಲೆಯ ಮದ್ಯಗಳಲ್ಲಿ ರಿಯಾಯಿತಿ ಹೆಚ್ಚಿನ ಖರೀದಿಗೆ ಒಂದು ಬಾಟಲ್ ಉಚಿತ ನೀಡುವುದಾಗಿ ಕೆಲವು ಮದ್ಯ ಮಾರಾಟಗಾರರು ಪ್ರಕಟಿಸಿದ್ದಾರೆ.

ಕೆಲವು ಬ್ರಾಂಡ್ ನವರು ಮಾರಾಟ ಹೆಚ್ಚಳಕ್ಕೆ ಮದ್ಯದ ಅಂಗಡಿಯವರಿಗೆ ದುಬಾರಿ ಬೆಲೆಯ 750 ಎಂಎಲ್ ನ ಫುಲ್ ಬಾಟಲ್ ಮೇಲೆ 100-ರಿಂದ 200 ರೂಪಾಯಿವರೆಗೂ ಕಂಪನಿಗಳು ತಮಗೆ ನೀಡಿದ ದರ ರಿಯಾಯಿತಿ ಕೊಡುಗೆಯನ್ನು ಗ್ರಾಹಕರಿಗೆ ನೀಡಿ ವ್ಯಾಪಾರ ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟಗಾರರು ಮುಂದಾಗಿದ್ದು, ಮೂರು ಬಾಟಲ್ ಖರೀದಿಸಿದರೆ ಒಂದು ಬಾಟಲ್ ಉಚಿತವಾಗಿ ನೀಡುವುದಾಗಿ ಕೆಲವು ಬಾರ್ & ರೆಸ್ಟೋರೆಂಟ್ ಗಳು ಘೋಷಿಸಿದೆ.

RELATED ARTICLES
- Advertisment -
Google search engine

Most Popular