- ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನ ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ವಸಂತ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ನಾಗಮ್ಮ ರವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ಶ್ರೀಮತಿ ವಸಂತ ನಾಗರಾಜ್ ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಿ ಪಿಡಬ್ಲ್ಯೂಡಿ ಬೋರಯ್ಯ ಘೋಷಿಸಿದ್ದಾರೆ. ತದನಂತರ ಅಭಿಮಾನಿಗಳು ಮತ್ತು ಮುಖಂಡರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಂತರ ಕಾಂಗ್ರೆಸ್ ಮುಖಂಡರು ಮತ್ತು ದರ್ಖಾಸ್ ಕಮಿಟಿ ಸದಸ್ಯರಾದ ಕೆಂಡಗಣ್ಣೇಗೌಡ ಮಾತನಾಡಿ ಚಿಕ್ಕಕರೆಯೂರು ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ವಸಂತ ನಾಗರಾಜ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ನಮ್ಮ ಗ್ರಾಮ ಪಂಚಾಯಿತಿಯು ಕಾಂಗ್ರೆಸ್ ಬೆಂಬಲಿತವಾಗಿದ್ದು ಕಾಂಗ್ರೆಸ್ ಬೆಂಬಲಿತರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷೆ ಶ್ರೀಮತಿ ವಸಂತ ನಾಗರಾಜ್ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಪ್ರತಿಯೊಬ್ಬರಿಗೂ ಚಿರಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಕರ್ ಕಾಂಗ್ರೆಸ್ ಮುಖಂಡರು ಮತ್ತು ದರ್ಖಾಸ್ ಕಮಿಟಿ ಸದಸ್ಯರಾದ ಕೆಂಡಗಣ್ಣೇಗೌಡ, ಬಾಬು ಜಗಜೀವನರಾಂ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ. ನಾಗರಾಜು, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಬಾಲಚಂದ್ರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿ, ವಿಜೇಂದ್ರಗೌಡ, ಸದಸ್ಯರಾದ ರಮೇಶ್, ಸಣ್ಣಸ್ವಾಮಿ ನಾಯಕ, ಮಹೇಶ್, ಮಲ್ಲೇಶ್, ಭಾಗ್ಯಮ್ಮಪುಟ್ಟಚಾರಿ, ಸೇರಿದಂತೆ ಸಿ.ಎನ್. ರವಿ, ಕೃಷ್ಣಗೌಡ, ಬಸವರಾಜು, ನಾಗೇಂದ್ರ, ಮಂಜು, ಮಂಜೇಗೌಡ, ಪ್ರಸನ್ನಕುಮಾರ್, ಲೋಕೇಶ್ ಎಂ, ಸಿಕೆ ಲೋಕೇಶ್, ಗೋವಿಂದೇಗೌಡ, ವೆಂಕಟೇಗೌಡ, ಮರಯ್ಯ ತಮ್ಮಯ್ಯ, ಪುಟ್ಟಸ್ವಾಮಿ, ಮಹಾದೇವು, ಪುಟ್ಟಸ್ವಾಮಿ, ಅಮೀರ್ ಖಾನ್, ಶ್ರೀನಿವಾಸ್, ಮಹದೇವು, ಉಮೇಶ್, ವೆಂಕಟೇಶ್, ಕುಮಾರ್, ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಬಿಲ್ ಕಲೆಕ್ಟರ್ ನರಸಿಂಹ, ಕಂಪ್ಯೂಟರ್ ಆಪರೇಟರ್ ಸುರೇಶ್, ಕೃಷ್ಣಮೂರ್ತಿ, ಮೂರ್ತಿ, ಹನುಮಂತರಾಜು, ಜ್ಯೋತಿ ಸೇರಿದಂತೆ ಗ್ರಾಮದ ಮುಖಂಡರು ಪಕ್ಷದ ಕಾರ್ಯಕರ್ತರು ಹಾಜರಿದ್ದರು.