ಹುಣಸೂರು,ಜ.03: ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರ ಕವಿ ಕುವೆಂಪು 120 ನೇ ಜನ್ಮದಿನಾಚರಣೆಯನ್ನು ದಿನಾಂಕ 05 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಆಚರಿಸಲಾಗುವುದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಕೆ.ಮಹದೇವ್ ತಿಳಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟನೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ನೆರೆವೇರಿಸಲಿದ್ದಾರೆ. ಪ್ರಧಾನ ಭಾಷಣ ಶಿಕ್ಷಕ ಜೆ.ಮಹಾದೇವ್, ಮುಖ್ಯ ಅತಿಥಿಗಳಾಗಿ, ಹಂದನಹಳ್ಳಿ ಸೋಮಶೇಖರ್, ದಲಿತ ಜಿಲ್ಲಾ ಸಂಚಾಲಕ ಸಮಿತಿ ಸದಸ್ಯ ನಿಂಗರಾಜ್ ಮಲ್ಲಾಡಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್, ಜಿ.ಕ.ಸಾ.ಪ. ಉಪಾಧ್ಯಕ್ಷ ಎಸ್.ಜಯರಾಂ ಭಾಗವಹಿಸಲಿದ್ದಾರೆ.
ಅಭಿನಂದನೆ ಸ್ವೀಕಾರ
ಎ.ಎಂ.ಸತೀಶ್ ಗ್ರಂಥಪಾಲಕರು, ಗಣೇಶ್ ಯುವ ಸಾಹಿತಿ ನಿಲುವಾಗಿಲು, ಕುಮಾರಿ ಇಂಚರ ಭರತನಾಟ್ಯ ಕಲಾವಿದೆ ಹುಣಸೂರು ಇವರನ್ನು ಕುವೆಂಪು ಜಯಂತಿ ಅಂಗವಾಗಿ ಸನ್ಮಾನಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.