Saturday, April 19, 2025
Google search engine

Homeರಾಜ್ಯಸುದ್ದಿಜಾಲರಾಮಭಕ್ತ ಹನುಮ ದೇವರ ಭಕ್ತಿಯ ಪರಾಕಾಷ್ಟತೆ ಯಾವುದೇ ಭಕ್ತರನ್ನು ಮೀರಿಸುವಂತಿದೆ: ಸೋಮೇಶ್ವರನಾಥ ಸ್ವಾಮೀಜಿ

ರಾಮಭಕ್ತ ಹನುಮ ದೇವರ ಭಕ್ತಿಯ ಪರಾಕಾಷ್ಟತೆ ಯಾವುದೇ ಭಕ್ತರನ್ನು ಮೀರಿಸುವಂತಿದೆ: ಸೋಮೇಶ್ವರನಾಥ ಸ್ವಾಮೀಜಿ

ವರದಿ: ಎಡತೊರೆ ಮಹೇಶ್

ಹೆಗ್ಗಡದೇವನಕೋಟೆ: ರಾಮಭಕ್ತರಾಗಿದ್ದ ಹನುಮಂತ ದೇವರು ಅವರ ಭಕ್ತಿಯ ಪರಾಕಾಷ್ಟತೆ ಯಾವುದೇ ಭಕ್ತರನ್ನು ಮೀರಿಸುವಂತಿದೆ ಎಂದು ಬಿ.ಜಿ.ಎಸ್. ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.

ಎಚ್ ಡಿ ಕೋಟೆ ಪಟ್ಟಣದ ಬಣ್ಣಾರಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿ ಹನುಮಾನ್ ಬೆಳ್ಳಿರಥಕ್ಕೆ ಶನಿವಾರ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣದ ದಿಕ್ಕಿನಲ್ಲಿ ಸೀತಾನ್ವೇಷಣೆಗೆ ಹೊರಟ ವಾನರರ ಮುಖಂಡನಾಗಿ ಲಂಕೆಗೆ ಹೋಗಿ ಸೀತೆಯ ವಿಷಯ ತಿಳಿಸಿದ ವೀರಾಗ್ರಣಿ ಆಂಜನೇಯನೇ ಯುದ್ಢ ಸಮಯದಲ್ಲಿ ರಾಮನಿಗೆ ಬಂದ ಅಷ್ಟಕಷ್ಟಗಳನ್ನು ತನ್ನ ಅತೀಂದ್ರಿಯ ಬುದ್ದಿವಂತಿಕೆ ಹಾಗೂ ತನ್ನಲ್ಲಿರುವ ವಿಶೇಷ ಶಕ್ತಿಯಿಂದ ಸೀತಾರಾಮ ಲಕ್ಷ್ಮಣರ ಕಷ್ಟಗಳನ್ನೂನಿವಾರಣೆ ಮಾಡಿದವನು ಮಹಾನ್ ಶಕ್ತಿವಂತ ಹನುಮ ಎಂದು ವ್ಯಾಖ್ಯಾನಿಸಿದರು.

ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಆಚರಿಸಲಿದ್ದು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ರೂಪವೆಂದು ಪೂಜಿಸಲಾಗುತ್ತದೆ ಎಂದರು.
ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಹನುಮ ಹೇಗೆ ರಾಮ ಭಕ್ತನೋ ಹಾಗೆ ನಾವೆಲ್ಲರೂ ಹನುಮ ಭಕ್ತರು ಮತ್ತು ತಾಲ್ಲೂಕಿನ ಜನರ ಭಕ್ತನಾಗಿ ಜನರ ಸೇವೆಯನ್ನು ನಾನು ನಿರ್ವಂಚನೆಯಿಂದ ಮಾಡುತ್ತಿದ್ದೇನೆ ಎಂದರು.

ತಾಲ್ಲೂಕು ಮತ್ತಷ್ಟು ಅಭಿವೃದ್ಧಿಯಾಗಲಿ ಪ್ರತಿ ವರ್ಷವೂ ಹನುಮ ಜಯಂತಿಯನ್ನು ಹೀಗೆ ಆಚರಿಸಿ ನಾವೆಲ್ಲರೂ ಸಂಭ್ರಮಿಸೋಣ, ಜಾತಿ ಧರ್ಮ ಭೇದವಿಲ್ಲದೆ ಹನುಮನ ಪೂಜೆಯಲ್ಲಿ ಒಂದಾಗೋಣ. ರಾವಣನ ಜೊತೆ ಯುದ್ಧ ಮಾಡಿ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ನೆರವಾಗಿದ್ದನು ಎಂದ ಬಿಸಿಯಾಗಿದೆ ಎಂದ ಅವರು ತಾಲ್ಲೂಕು ಹನುಮಸೇವಾ ಸಮಿತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ತಾಲ್ಲೂಕಿನ ಜನರಿಗೆ ಹನುಮನ ಶಕ್ತಿ ವರವಾಗಲಿ ಎಂದು ತಾಲೂಕಿನ ಜನತೆಗೆ ಶುಭ ಹಾರೈಸಿದರು.

ಪಟ್ಟಣದ ಬಾಪೂಜಿ ವೃತ್ತದಲ್ಲಿ ಪ್ರತಿ ವರ್ಷದಂತೆ ಮುಸ್ಲಿಂ ಮುಖಂಡರು ಹನುಮ ಜಯಂತಿಯ ಅಂಗವಾಗಿ ಹನುಮ ಭಕ್ತರಿಗೆ ಕುಡಿಯಲು ನೀರುಮಜ್ಜಿಗೆ ಮತ್ತು ಪಾನೀಯಗಳನ್ನು ವಿತರಿಸಿ ಹೆಚ್. ಡಿ. ಕೋಟೆ ಹಾಗೂ ಸರಗೂರು ತಾಲೂಕಿನ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಮೂಲಕ ವಿಶೇಷವಾಗಿ ಗಮನ ಸೆಳೆದದ್ದು ಇಂದಿನ ಹನುಮ ಜಯಂತಿಯ ವಿಶೇಷವಾಗಿತ್ತು.

ಹನುಮ ಜಯಂತಿಯ ಶೋಭಾಯಾತ್ರೆಯ ಮೆರವಣಿಗೆಯಲ್ಲಿ ನೂತವಾಗಿ ನಿರ್ಮಿಸಿರುವ ಶ್ರೀ ಹನುಮಂತ ಮೂರ್ತಿಯೊಂದಿಗೆ ಮಂಗಳವಾದ್ಯ, ನಂದಿ ಕಂಬ, ವೀರಗಾಸೆ, ಚಂಡೆ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸಾಗಿ ಪಟ್ಟಣದಲ್ಲಿರುವ ಶ್ರೀ ಲಕ್ಷ್ಮಿವರದರಾಜ ಸ್ವಾಮಿ ದೇವಾಲಯದ ಬಳಿ ಸಮಾವೇಶಗೊಂಡಿತು.

ಶೋಭಾಯಯಾತ್ರೆಯಲ್ಲಿ ಭಾಗವಹಿಸಿದ ಸಹಸ್ರಾರು ಮಂದಿ ಭಕ್ತ ವೃಂದಕ್ಕೆ ಇಂದು ಬೆಳಿಗ್ಗೆ ಹಾಗೂ ಸಂಜೆ 4 ಗಂಟೆ ನಂತರ ಪ್ರಸಾದ ವಿತರಣೆಯನ್ನು ವಿಶೇಷ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ವೃತ್ತ ನಿರೀಕ್ಷಕ ಶಬ್ಬೀರ್ ಹುಸೇನ್ ಮಾರ್ಗದರ್ಶನದಲ್ಲಿ ಇಂದಿನ ಹನುಮ ಜಯಂತಿ ಕಾರ್ಯಕ್ರಮಕ್ಕೆ ಹಲವು ಜಿಲ್ಲಾ ವಲಯಗಳಿಂದ ಆಗಮಿಸಿದ್ದ ಪೊಲೀಸರ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಬಿಜೆಪಿ ಮುಖಂಡ ಕೆ ಎಂ, ಕೃಷ್ಣನಾಯಕ, ಚಂದ್ರಿಕಾ ಯಮುನಾ, ದೊರೆಸ್ವಾಮಿ, ಅಧ್ಯಕ್ಷರಾದ ಚಂದ್ರಮೌಳಿ, ಡೈರಿಶ್ರೀಕಾಂತ್, ಮುತ್ತಣ್ಣ, ಜಯಂತ್, ಎಡತೊರೆ ಮಹೇಶ ರಾಜಣ್ಣ, ನಂದೀಶ್, ಮಹೇಶ್, ಸುರೇಶ್, ಪ್ರಶಾಂತ್, ಸಂತೋಷ್, ರಾಹುಲ್, ಅಶೋಕ್, ವಿನಯ್ ಭಜರಂಗಿ, ಸುಧಾಕರ್, ಮಾದಾಪುರ ನಂದೀಶ್, ಸಿ ಕೆ ಗಿರೀಶ್, ಯೋಗೇಶ್, ವೆಂಕಟಸ್ವಾಮಿ, ರಾಜು ಬಿಡುಗಲು, ಸಂತೋಷ್, ರುದ್ರಪ್ಪ, ಸತೀಶ್, ವೆಂಕಟೇಶ್, ವಿನಯ್ ಭಜರಂಗಿ, ರೂಪೇಶ್, ಪಂಡಿತ್, ಲಿಖಿತ್, ಪೂರ್ಣೇಶ್, ಪ್ರಮೋದ್, ನಾಗೇಶ್, ಶಂಭೇಗೌಡ, ವೀರಪ್ಪ, ನಟರಾಜು, ಶಿವರಾಜಪ್ಪ, ಜೆ.ಬಿ.ಶಿವಸ್ವಾಮಿ, ಬಸವರಾಜು, ಪಂಡಿತ್, ಎಚ್.ಕೆ.ಸುರೇಶ್, ಶಿವರಾಜಪ್ಪ, ನಾಗೇಶ್, ಮೋಹನ್, ಸುಧಾಕರ್, ಪಪ್ಪು, ಶಂಭುಲಿಂಗನಾಯಕ, ಮಾದೇಶ್, ಲೋಕೇಶ್, ದಾಸ, ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular