Saturday, April 19, 2025
Google search engine

Homeರಾಜ್ಯನಾಯಕ ಜನಾಂಗಕ್ಕೆ ನಿಂದನೆ: ಪೊಲೀಸ್ ಇಲಾಖೆಗೆ ದೂರು

ನಾಯಕ ಜನಾಂಗಕ್ಕೆ ನಿಂದನೆ: ಪೊಲೀಸ್ ಇಲಾಖೆಗೆ ದೂರು

ಯಳಂದೂರು: ತಾಲೂಕಿನ ಅಗರ ಗ್ರಾಮದಲ್ಲಿ ಲಿಂಗಾಯಿತ ಸಮುದಾಯದ ಮುಖಂಡರು ನಾಯಕ ಜನಾಂಗಕ್ಕೆ ಮನೆ ನೀಡಿದ ವ್ಯಕ್ತಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಲ್ಲದೆ ಅವರ ಜನಾಂಗದ ಸಭೆಯೊಂದರಲ್ಲಿ ನಾಯಕ ಜನಾಂಗದವರಿಗೆ ಅಂಗಡಿ, ಮನೆಗಳನ್ನು ಬಾಡಿಗೆಗೆ ನೀಡಬಾರದು ಎಂಬ ನಿರ್ಧಾರ ಮಾಡಿರುವ ಕ್ರಮವನ್ನು ಖಂಡಿಸಿ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗೆ ವಾಲ್ಮೀಕಿ ಸಮಾಜ ಸೇವಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾನುವಾರ ದೂರು ನೀಡಲಾಯಿತು.

ಅಗರ ಗ್ರಾಮದಲ್ಲಿ ಲಿಂಗಾಯಿತ ಸಮುದಾಯದ ಮುಖಂಡರೊಬ್ಬರು ಕೂಟ ಸೇರಿದ್ದ ಸಮಯದಲ್ಲಿ ನಾಯಕ ಜನಾಂಗದವರು ಮಂಸಹಾರಿಗಳು ಇವರಿಗೆ ಅಂಗಡಿ ಹಾಗೂ ಮನೆಯನ್ನು ಬಾಡಿಗೆಗೆ ನೀಡಬಾರದು ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಲ್ಲದೆ ವಿ. ಸುರೇಶ ಎಂಬುವರ ಕುಟುಂಬಕ್ಕೆ ನಾಯಕ ಸಮುದಾಯದವರಿಗೆ ಮನೆ ನೀಡಿದರು ಎಂಬ ಕಾರಣಕ್ಕೆ ಅವರನ್ನು ತಮ್ಮದೇ ಸಮಾಜದ ಸಭೆ ಸಮಾರಂಭಗಳಿಂದ ದೂರ ಇಡಲಾಗಿದೆ. ಇದು ನಾಯಕ ಸಮಾಜವನ್ನು ತೇಜೋವಧೆ ಮಾಡುವ ಕೃತ್ಯವಾಗಿದೆ. ಇಂತಹ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಒಂದು ಸಮುದಾಯವನ್ನು ಇದರು ತುಳಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಗರ ಗ್ರಾಮದಲ್ಲಿ ಸಾಮರಸ್ಯವಿದೆ. ಇಲ್ಲಿ ಶೇ. ೭೦ ರಷ್ಟು ಜನರು ನಾಯಕ ಸಮುದಾಯದವರೇ ಇದ್ದಾರೆ. ಇಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡಲಾಗುತ್ತಿದೆ. ಇಂತಹ ಬಾಲಿಶ ಹೇಳಿಕೆಗಳನ್ನು ನೀಡಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ವಹಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ಕೆ. ಶ್ರೀಕಾಂತ್ ಮಾತನಾಡಿ, ಅಗರ ಗ್ರಾಮದ ನಾಯಕ ಸಮುದಾಯದವರು ನೀಡಿರುವ ದೂರು ಹಾಗೂ ವಿಡಿಯೋಗಳನ್ನು ಕೂಲಕುಂಷವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಮಾಜದ ಸ್ವಾಸ್ಥ್ಯವನ್ನು ಕದಡುವ ಇಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಸುರೇಶ ಎಂಬ ಕುಟುಂಬದವರು ನೀಡಿರುವ ದೂರಿನ ವಿಚಾರವಾಗಿಯೂ ನಾವು ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆಗಳನ್ನು ಸಂಗ್ರಹಿಸಿದ್ದೇವೆ ಈ ಬಗ್ಗೆ ಕಾನೂನು ಕ್ರಮ ವಹಿಸಲಾಗುವುದು. ಎಲ್ಲರೂ ಶಾಂತಿಯಿಂದ ಇರಬೇಕೆಂದು ಮನವಿ ಮಾಡಿದರು.

ಪಿಎಸ್‌ಐ ಕರಿಬಸಪ್ಪ, ನಾಯಕ ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಆಲ್ಕರೆ ಅಗ್ರಹಾರ ರಂಗಸ್ವಾಮಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಎನ್. ಮಂಜುನಾಥ, ಸೋಮಶೇಖರ್, ಆನಂದನಾಯಕ, ರಾಚಪ್ಪಾಜಿ, ಆರ್. ಶಿವರಾಜು, ಕೃಷ್ಣಮೂರ್ತಿ, ಹನುಮಂತನಾಯಕ, ನಾಗರಾಜು, ಮಧು, ಚರಣ್, ಹರ್ಷ, ಕಿರಣ್, ಹರೀಶ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular