Monday, April 21, 2025
Google search engine

HomeUncategorizedಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ: ಡೆಪ್ಯುಟಿ ಮ್ಯಾನೇಜರ್​ ಸಾವು

ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ: ಡೆಪ್ಯುಟಿ ಮ್ಯಾನೇಜರ್​ ಸಾವು

ಮಂಡ್ಯ: ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ ಗೊಂಡು ಡೆಪ್ಯುಟಿ ಮ್ಯಾನೇಜರ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ NSL ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಶ್ರೀಧರ್(48) ಮೃತ ಡೆಪ್ಯುಟಿ ಮ್ಯಾನೇಜರ್. ವಿದ್ಯುತ್ ವಿಭಾಗದ ಕಂಟ್ರೋಲ್ ರೂಂನಲ್ಲಿ ಕೆಲಸ ಮಾಡುವಾಗ ದುರಂತ ಸಂಭವಿಸಿದೆ.

ಸ್ಫೋಟದ ಬಳಿಕ ರಾಸಾಯನಿಕ ಸೋರಿಕೆಯಿಂದ ಶ್ರೀಧರ್​ ಅಸ್ವಸ್ಥಗೊಂಡಿದ್ದಾರೆ. ಇತರೆ ಸಿಬ್ಬಂದಿಗಳು ಗಮನಿಸಿ ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular