Saturday, April 19, 2025
Google search engine

Homeರಾಜ್ಯಪ್ರಯಾಣಿಕರಿಗೆ ಮತ್ತೊಂದು ಶಾಕ್: ಬಿಎಂಟಿಸಿ ಪಾಸ್ ದರ ಏರಿಕೆ

ಪ್ರಯಾಣಿಕರಿಗೆ ಮತ್ತೊಂದು ಶಾಕ್: ಬಿಎಂಟಿಸಿ ಪಾಸ್ ದರ ಏರಿಕೆ

ಬೆಂಗಳೂರು: ಬಸ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್ ಗಳ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್​ ದರ ಏರಿಕೆ ಮಾಡಿ ಬಿಎಂಟಿಸಿ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಹೊರಡಿಸಲಾಗಿದೆ.

ಬಸ್​​ ಪಾಸ್​ ದರ ಏರಿಕೆ ಪಟ್ಟಿ:
  • ಸಾಮಾನ್ಯ ದಿನದ ಪಾಸು 70 ರೂಪಾಯಿಯಿಂದ 80 ರೂ. ಏರಿಕೆ
  • ವಾರದ ಪಾಸು 300 ರೂಪಾಯುಯಿಂದ 350 ರೂ. ಏರಿಕೆ
  • ಮಾಸಿಕ ಪಾಸು 1050 ರೂಪಾಯಿಯಿಂದ 1200 ರೂ. ಏರಿಕೆ
  • ನೈಸ್ ರಸ್ತೆಯ ಟೋಲ್ ಶುಲ್ಕ ಸೇರಿ 2200 ರೂ. 2350 ರೂ. ಏರಿಕೆಯಾಗಿದೆ.
  • ವಜ್ರ ಬಸ್ಸಿನ ದಿನದ ಪಾಸು 120 ರೂಪಾಯಿಯಿಂದ 140 ರೂ. ಏರಿಕೆ
  • ವಜ್ರ ಬಸ್ಸಿನ ಮಾಸಿಕ ಪಾಸು 1800 ರೂಪಾಯಿಯಿಂದ 2000 ರೂ. ಏರಿಕೆ
  • ವಾಯುವಜ್ರ ಬಸ್ಸಿನ – 3755 ರಿಂದ 4000 ರೂ ಏರಿಕೆ
  • ವಿದ್ಯಾರ್ಥಿ ವಜ್ರ ಮಾಸಿಕ ಪಾಸು- 1200 ರಿಂದ 1400 ರೂ ಗೆ ಏರಿಕೆಯಾಗಿದೆ.
RELATED ARTICLES
- Advertisment -
Google search engine

Most Popular