Saturday, April 19, 2025
Google search engine

Homeರಾಜ್ಯತಲೆಮರೆಸಿಕೊಂಡ ನಕ್ಸಲ್ ನನ್ನು ಆದಷ್ಟು ಬೇಗ ಪತ್ತೆ ಮಾಡ್ತೇವೆ : ಗೃಹ ಸಚಿವ ಜಿ.ಪರಮೇಶ್ವರ್

ತಲೆಮರೆಸಿಕೊಂಡ ನಕ್ಸಲ್ ನನ್ನು ಆದಷ್ಟು ಬೇಗ ಪತ್ತೆ ಮಾಡ್ತೇವೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಚಿಕ್ಕಮಂಗಳೂರು ಭಾಗದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 6 ಜನ ನಕ್ಸಲರು ಈಗಾಗಲೇ ಸರ್ಕಾರದ ಮುಂದೆ ಶರಣಾಗಿದ್ದು ಅವರನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನಿನ್ನೆ ಕೋರ್ಟ್ ಆದೇಶ ಹೊರಡಿಸಿತ್ತು.ಆದರೆ ಇನ್ನೋರ್ವ ನಕ್ಸಲ್ ತಲೆಮರಿಸಿಕೊಂಡಿದ್ದು, ಆತನನ್ನು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ್ತೋರ್ವ ನಕ್ಸಲ್ ತಲೆಮೆರೆಸಿಕೊಂಡಿರುವ ವಿಚಾರವಾಗಿ ಶರಣಾಗತಿಯಾದವರು ಆತನನ್ನು ಹೊರ ಹಾಕಿದ್ದರು ಎಂಬ ಮಾಹಿತಿ ಇದೆ.ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ ಆದಷ್ಟು ಬೇಗ ಅವನನ್ನು ಹುಡುಕುತ್ತೇವೆ.ಚಿಕ್ಕಮಗಳೂರು ಭಾಗದಲ್ಲಿಯೇ ಇದ್ದಾನೆ ಎನ್ನುವ ಮಾಹಿತಿ ಇದೆ ಎಂದರು.

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ 6 ಜನ ಇದ್ದಾರೆ ಅನ್ನೋದು ಇತ್ತು. ಬೇರೆ ರಾಜ್ಯದಿಂದಲೂ ಬಂದರೆ ಅದರ ಮೇಲೆ ನಿಗಾ ಇಡಲಾಗುತ್ತದೆ. ಓಡಿಸ್ಸಾ ಕೇರಳದಿಂದ ಬರುವ ಸಾಧ್ಯತೆ ಇದೆ. ನಕ್ಸಲ್ ನಾಯಕ ವಿಕ್ರಂ ಗೌಡ ಕುಟುಂಬ ಪರಿಹಾರ ನೀಡುವ ವಿಚಾರವಾಗಿ ಈ ಕುರಿತು ಪರಿಶೀಲನೆ ನಡೆಸುತ್ತೇವೆ. ಆ ಕೇಸ್ ಬೇರೆ ಈ ಪ್ರಕರಣವೇ ಬೇರೆ ಎಂದು ಜಿ ಪರಮೇಶ್ವರ್ ತಿಳಿಸಿದರು.

ಶರಣಾಗತಿಯಾದ ನಕ್ಸಲರು ಶಸ್ತ್ರಾಸ್ತ್ರ ಹಸ್ತಾಂತರಿಸದ ವಿಚಾರವಾಗಿ ಅದನ್ನು ಹುಡುಕಿಸಬೇಕು ಕಾಡಿನಲ್ಲಿ ಎಲ್ಲಿ ಬೀಸಾಕಿದ್ದರೋ ಗೊತ್ತಿಲ್ಲ. ಈಗಾಗಲೇ ಪೊಲೀಸರು ಶಸ್ತ್ರಾಸ್ತ್ರ ಪತ್ತೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಶಸ್ತ್ರಾಸ್ತ್ರ ಪತ್ತೆಗಾಗಿ  ಅವರಿಂದ ಸಹಾಯ  ತೆಗೆದುಕೊಳ್ಳುತ್ತೇವೆ. ಅದಕ್ಕೆಲ್ಲ ಒಂದು ಪ್ರಕ್ರಿಯೆ ಇರುತ್ತೆ. ಬಿಜೆಪಿಯವರಿಗೆ ಏನು ಗೊತ್ತಿಲ್ವಾ ಅವರು ಸಹ ಸರ್ಕಾರ ನಡೆಸಿದ್ದರು ಎಂದರು.

RELATED ARTICLES
- Advertisment -
Google search engine

Most Popular